ರೋಷನ್ ಬೇಗ್ ಅವರ ಮೇಲೆ ಬಿಜೆಪಿ ಅವರಿಗೇಕೆ ಇಷ್ಟು ಪ್ರೀತಿ ಅಂತಾ ಗೊತ್ತಗುತ್ತಿಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್…

Promotion

ಬೆಂಗಳೂರು,ಜು,16,2019(www.justkannada.in): ಐಎಂಎ ಪ್ರಕರಣದಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಈಗ ರೋಷನ್ ಬೇಗ್ ಅವರ ಮೇಲೆ ಬಿಜೆಪಿ ಅವರಿಗೆ ಯಾಕೆ ಇಷ್ಟು ಪ್ರೀತಿ ಅಂತ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಕೆಕೆ ಗೆಸ್ಟ್ ಹೌಸ್ ಬಳಿ ಮಾಧ್ಯಮಗಳ ಜತೆ ಮಾತನಾಡಿದ ದಿನೇಶ್ ಗುಂಡೂರಾವ್, ಐಎಂಎ ಬಿಜೆಪಿ ಹೋರಾಟ ನಡೆಸಿತ್ತು. ಈಗ ರೋಷನ್ ಬೇಗ್ ಅವರನ್ನು ಅವರೇ ಕರೆದುಕೊಂಡು ಹೋಗುವ ಪ್ರಯತ್ನವನ್ನ  ಮಾಡುತ್ತಿದ್ದಾರೆ. ಅವರಿಗೆ ಸ್ಪೆಷಲ್ ಫ್ಲೈಟ್ ಮಾಡಿಸಿ ಬಿಜೆಪಿ ನಾಯಕರೇ ಅವರ ಜೊತೆಗೆ ಇದ್ದರು. ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಇವತ್ತು ಸ್ಪಷ್ಟವಾಗಿ ಗೊತ್ತಾಗ್ತಿದೆ ಎಂದು ಕಿಡಿಕಾರಿದರು.

ಅವರಿಗೆ ಸರ್ಕಾರ ಹಿಡಿಯಬೇಕು ಎಂಬುದೇ ಒಂದು ಉದ್ದೇಶವಾಗಿದೆ. ನಿನ್ನೆ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಒಂದೇ ಸಾಕು . ನಮ್ಮ ಶಾಸಕರನ್ನು ಸೆಳೆಯಲು ಎಂತಹ ಕೆಲಸ ಮಾಡಿದ್ದಾರೆ ಎಂದು. ಆ ಹೇಳಿಕೆ ಹಿಂದೆ ಏನು ಇದೆ ಅಂತ ಗೊತ್ತಾಗುತ್ತಿದೆ.  ಯಡಿಯೂರಪ್ಪ ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡ್ತಿದ್ದಾರೆ. ಶಾಸಕರ ಯಾಕೆ ರಾಜೀನಾಮೆ ನೀಡುತ್ತಿದ್ದಾರೆ ಅಂತ ಬಿಜೆಪಿ ನಡೆಯಿಂದ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

ಹಾಗೆಯೇ ವಿಶ್ವಾಸಮತಯಾಚನೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ನಾವು ವಿಶ್ವಾಸಮತಯಾಚನೆ ಮಾಡುವುದಕ್ಕೆ ಮುಂದಾಗಿದ್ದೇವೆ.  ನಮಗೆ ವಿಶ್ವಾಸ ಇದೆ. ನಮ್ಮಲ್ಲಿ ಗೊಂದಲ ಇರಬಾರದು ಅದಕ್ಕೆ ನಾವು ವಿಶ್ವಾಸಮತಯಾಚನೆಗೆ ಮುಂದಾಗಿದ್ದೇವೆ. ನಮಗೆ ವಿಶ್ವಾಸ ಇದೆ ನಾವು ಗೆಲ್ಲುತ್ತೇವೆ. ಇನ್ನು  ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ರಾಜ್ಯದಲ್ಲಿ ತುಂಬಾ ಬೆಳವಣಿಗೆ ಆಗಲಿದೆ ಎಂದು ತಿಳಿಸಿದರು.

Key words: BJP -Roshan Baig-KPCC President -Dinesh Gundurao.