ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ‍್ಧತೆ ನೋಡಿದ್ರೆ ಕಾಂಗ್ರೆಸ್ ಧೂಳಿಪಟವಾಗುತ್ತೆ- ಮಾಜಿ ಸಿಎಂ ಬಿಎಸ್ ವೈ.

Promotion

ಶಿವಮೊಗ್ಗ,ನವೆಂಬರ್,25,2022(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ‍್ಧತೆ ನೋಡಿದರೇ ಕಾಂಗ್ರೆಸ್ ಧೂಳಿಪಟವಾಗುತ್ತೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ,  ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನ ಬಲಪಡಿಸಬೇಕಿದೆ.  ರಾಜ್ಯದಲ್ಲಿ ಕಾಂಗ್ರೆಸ್  ಮುಳುಗುತ್ತಿರುವ ಹಡಗು. ಕಾಂಗ್ರೆಸ್ ನಲ್ಲಿ ಕೆಲವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಚುನಾವಣೆಗೆ  ಬಿಜೆಪಿ ನಡೆಸುತ್ತಿರುವ ಸಿದ್ದತೆ ನೋಡಿದರೇ ಕಾಂಗ್ರಸ್ ಧೂಳಿಪಟವಾಗುತ್ತದೆ. ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತೆ ಹೋಗುತ್ತಾರೆ ಎಂದು ಹೇಳಿದರು.

Key words: BJP – ready – assembly- elections- former CM-BS Yeddyurappa