ರಾಜ್ಯದಲ್ಲಿ 2023ಕ್ಕೆ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಿ- ಕಾರ್ಯಕರ್ತರಿಗೆ ಸಿಎಂ ಬೊಮ್ಮಾಯಿ ಕರೆ.

Promotion

ದಾವಣಗೆರೆ,ನವೆಂಬರ್,23,2022(www.justkannada.in):  2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನ  ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಿ ಎಂದು ಕಾರ್ಯಕರ್ತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಇಂದು ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹರಿಹರದಲ್ಲಿ 2023ಕ್ಕೆ  ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಿ. ಭಾರತ ದೇಶದಲ್ಲಿ ಹರಿಹರ ಪುಣ್ಯಕ್ಷೇತ್ರವಾಗಿದೆ . ಹರಿಹರ ಕ್ಷೇತ್ರವನ್ನ ಅಭಿವೃದ್ಧಿಪಡಿಸೋಣ. ಕೈಗಾರಿಕೆ ಸ್ಥಾಪನೆ ಮಾಡಿ ಸಾವಿರಾರು ಯುವಕರಿಗೆ ಉದ್ಯೋಗ ನೀಡುತ್ತೇವೆ.  ಹರಿಹರವನ್ನ ಕೈಗಾರಿಕೆ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಕ್ಲಿ ಡಬಲ್ ಇಂಜಿನ್ ಸರ್ಕಾರವಿದೆ . ಪ್ರಧಾನಿ ಮೋದಿ ವಿಶ್ವಮಾನ್ಯ ನಾಯಕರಾಗಿ ಬೆಳೆದಿದ್ದಾರೆ. ಭಾರತ ಸಮಗ್ರ ಅಭಿವೃದ್ದಿಗೆ ಮೋದಿ ಪಣ ತೊಟ್ಟಿದ್ದಾರೆ.  58 ಲಕ್ಷ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಿದೆ.   ರೈತರಿಗಾಗಿ ಆರೋಗ್ಯ ಶಿಕ್ಷಣದಲ್ಲಿ ಎಲ್ಲಾ ಯೋಜನೆ ತಂದಿದ್ದೇವೆ. 4ಕೊಟಿ ಜನರಿಗೆ ಆಯಷ್ಮಾನ್ ಯೋಜನೆ ಪ್ರಯೋಜನ ಸಿಕ್ಕಿದೆ.  ಮುದ್ರಾ ಯೋಜನೆಯಡಿ ಯುವಕರಿಗೆ ಉದ್ಯೋಗ,  ಕೈಗಾರಿಕೆ ನೀರಾವರಿ ಯೋಜನೆಗೆ ಸಂಕಲ್ಪ ಮಾಡಿದ್ದೇನೆ. ನಮ್ಮ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಗುತ್ತಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: BJP –power- state – 2023-CM Bommai -calls – activists.