ಬಿಜೆಪಿಯವರು ಕೂಡ ನಮ್ಮ ಬಗ್ಗೆ ಪೋಸ್ಟರ್ ಮಾಡಿದ್ದಾರೆ, ಅವರನ್ನೇಕೆ ಬಂಧಿಸಿಲ್ಲ- ಸಿದ್ಧರಾಮಯ್ಯ ಆಕ್ರೋಶ.

Promotion

ಬೆಂಗಳೂರು,ಸೆಪ್ಟಂಬರ್,22,2022(www.justkannada.in):  ಪೇ ಸಿಎಂ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿರುವ ನಡೆಯನ್ನ ಖಂಡಿಸಿ ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ,  ಸರ್ಕಾರದ 40 ಪರ್ಸೆಂಟ್  ಕಮಿಷನ್ ಹಿನ್ನೆಲೆ ಅಂದೋಲನ ಮಾಡುತ್ತಿದ್ದೇವೆ. ಹೀಗಾಗಿ ಪೋಸ್ಟರ್ ಅಂಟಿಸಲಾಗಿದೆ.  ಇವರು ಕೂಡ ನಮ್ಮ ಬಗ್ಗೆ ಏನೇನೋ ಪೋಸ್ಟರ್ ಮಾಡುತ್ತಿದ್ದಾರೆ. ನಮಗೆ ಬೇಡವಾದವರು ಅಂತಾ ಪೋಸ್ಟ್ ಮಾಡಿದ್ದಾರೆ. ಅವರನ್ಯಾಕೆ  ಬಂಧಿಸಿಲ್ಲ ಕೂಡಲೇ ನಮ್ಮ ಕಾರ್ಯಕರ್ತರನ್ನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‘ನಾಳೆಯಿಂದ ನಾವು ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತೇವೆ. ಇವರು  ಹಗರಣಗಳ ಬಗ್ಗೆ ಏನು ಮಾಡುತ್ತಿಲ್ಲ. ಮುಚ್ಚಿ ಹಾಕುತ್ತಿದ್ದಾರೆ.  ಕಮಿಷನ್ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ್ರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಕಾರಿದರು.

Key words: BJP – posters – arrested-former CM-Siddaramaiah -outraged.