ಬಿಜೆಪಿಯಿಂದ ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಯತ್ನ: ಎಲ್ಲಾ ರಾಜ್ಯದಲ್ಲೂ ಸರ್ಕಾರ ರಚನೆಗೆ ಪ್ಲಾನ್-ಹೆಚ್.ಡಿಕೆ ವಾಗ್ದಾಳಿ.

Promotion

ರಾಮನಗರ,ಜೂನ್,24,2022(www.justkannada.in): ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ.  ಎಲ್ಲಾ ರಾಜ್ಯದಲ್ಲೂ ಸರ್ಕಾರ ರಚನೆಗೆ ಪ್ಲಾನ್ ಮಾಡಿದೆ. ವಿರೋಧ ಪಕ್ಷಗಳೇ ಇರಬಾರದೆಂಬುದು ಬಿಜೆಪಿ ಉದ್ಧೇಶವಾಗಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

ಕಾಂಗ್ರಸ್ ಬಗ್ಗೆ ಸಾಫ್ಟ್ ಕಾರ್ನರ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿಕೆ,  ನಾನ್ಯಾಕೆ ಕಾಂಗ್ರೆಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಲಿ..?  ನಮ್ಮ ಕುತ್ತಿಗೆ ಕೊಯ್ದಿದ್ದೇ ಕಾಂಗ್ರೆಸ್ ನವರು. ಯಾರ ಮೇಲೂ ಅನುಕಂಪದ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್ ನಾಯಕರನ್ನ ಓಲೈಸಿಕೊಳ್ಳಲು ಹೇಳುತ್ತಿಲ್ಲ ಎಂದು ತಿಳಿಸಿದರು.

Key words: BJP- Plan- government-all state-HD Kumaraswamy