ಬಿಜೆಪಿ ಸಾಮಾಜಿಕ ನ್ಯಾಯ ಮೀಸಲಾತಿ ಪರ ಇಲ್ಲ : ನಾವು ಅಧಿಕಾರಕ್ಕೆ ಬಂದ ಕೂಡಲೇ‌ ಜಾತಿಗಣತಿ ವರದಿ ತೆಗೆದುಕೊಳ್ಳುತ್ತೇನೆ- ಸಿದ್ಧರಾಮಯ್ಯ.

ಮೈಸೂರು,ಆಗಸ್ಟ್,11,2021(www.justkannada.in):  ನಾವು ಅಧಿಕಾರಕ್ಕೆ ಬಂದ ಕೂಡಲೇ‌ ಜಾತಿಗಣತಿ ವರದಿ ತೆಗೆದುಕೊಳ್ಳುತ್ತೇನೆ. ಸರ್ಕಾರ ಬಂದ ವೇಳೆ‌ ಮೊದಲ ಕೆಲಸವೇ ಜಾತಿಗಣತಿ ರಿಪೋರ್ಟ್ ಪಡೆಯೋದು. ವರದಿ ತೆಗೆದುಕೊಂಡು ಅದನ್ನ ಚರ್ಚೆಗೆ ಇಡುತ್ತೇ‌ನೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ರಿಪೋರ್ಟ್ ಪಡೆಯದಿದ್ದರೆ ಅದರಲ್ಲಿ‌ ಎನಿದೆ ಅಂತ ತಿಳಿಯೋದಾದ್ರು ಹೇಗೆ.? ನನ್ನ ಸರ್ಕಾರ ಇದ್ದಾಗ ಜಾತಿಗಣತಿ ಮಾಡಿಸಿದೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅದು ರೆಡಿಯಾಯ್ತು. ಆದರೆ ಪುಟ್ಟರಂಗಶೆಟ್ಟಿ ಇದ್ದಾಗ ಅದನ್ನ ತೆಗೆದುಕೊಳ್ಳದಂತೆ ಹೇಳಿದ್ರು‌. ಆ ರಿಪೋರ್ಟ್ ಪಡೆಯದಂತೆ ಕುಮಾರಸ್ವಾಮಿ ಸೂಚಿಸಿದ್ರು. ಆದರೆ ನಾನು ಅದನ್ನ ರಿಪೋರ್ಟ್ ತೆಗೆದುಕೊಂಡು ಚರ್ಚೆ ಮಾಡಿಸುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ಪರ ಇಲ್ಲ…

ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ಪರ ಇಲ್ಲ. ಮೀಸಲಾತಿ ವಿಚಾರ ಬಂದಾಗೆಲ್ಲ ಆರ್ ಎಸ್ ಎಸ್ ನವರು ಅದನ್ನ ನಿಲ್ಲಿಸಬೇಕು ಅಂತ ಮುಂದಾದ್ರು. ಸಂವಿಧಾನ ಬದಲಾಯಿಸಬೇಕು ಅಂತ ಹುನ್ನಾರ ಮಾಡಿದ್ರು. ಈಗ ಮುಂದುವರಿದ ಜಾತಿಗಳಲ್ಲೂ ಕೂಡಾ ಬಡವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಆದಾದ ಬಳಿಕ ಆರ್ ಎಸ್ಎಸ್ ಅಜೆಂಡಾ ಬದಲಾಗಿದೆ. ಈಗ ಅವರು ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ. ಜಾತಿ ಗಣತಿ ಮಾಡಿದ್ರೆ ಜಾತಿ ಜಾತಿಗಳ ನಿಖರ ಸಂಖ್ಯೆ ಗೊತ್ತಾಗುತ್ತೆ. ಅಗ ಸಮಾಜದಲ್ಲಿ ಬಡತನದಲ್ಲಿರುವವರಿಗೆ ವಿಶೇಷ ಯೋಜನೆ ಕೊಡಬಹುದು. ಅವರಿಗೆ ವಿಶೇಷ ಅವಕಾಶ ನೀಡಬಹುದು. ಕರ್ನಾಟಕದಲ್ಲಿ ಜಾತಿ ಗಣತಿ ಆಗಬೇಕು. ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೂ ಕೂಡಾ ಶೇ.10 ಮೀಸಲಾತಿ ಕೊಟ್ಟಿದೆ. ನನ್ನ ಪ್ರಕಾರ ಇದು ಸಂವಿಧಾನ ಬಾಹಿರ. ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರಿಗೆ ಮೀಸಲಾಗಿ ಎಂದು ಹೇಳಿದೆ. ಎಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಅಂತ ಹೇಳಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಮೊದಲು ಮೇಕೆದಾಟು ಯೋಜನೆಯನ್ನ ಕೈಗೆತ್ತಿಕೊಂಡು ಶುರು ಮಾಡಬೇಕು

ಮೇಕೆದಾಟು ಯೋಜನೆ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ತಮಿಳುನಾಡಿನ ಪಾಲಿಗೆ ಧಕ್ಕೆ ಆದಾಗ ಮಾತ್ರ ವಿರೋಧ ಮಾಡ್ತಾರೆ. ಸರ್ಕಾರಕ್ಕೆ ಕಮಿಟ್ಮೆಂಟ್ ಇದ್ದರೆ ಮೇಕೆದಾಟು ಯೋಜನೆ ಮಾಡಬೇಕು. ಕೇಂದ್ರದ ಟ್ರಿಬ್ಯೂನಲ್ ಬಳಿ ಹೋಗಿ ಅನುಮತಿ ಪಡೆಯಲಿ. ಆ ನಂತರ ಮೇಕೆದಾಟು ಯೋಜನೆ‌ ಪ್ರಾರಂಭ ಮಾಡಲಿ. ಅದನ್ನ ಬಿಟ್ಟು ತಮಿಳುನಾಡಿಗೆ ಪತ್ರ ಬರೆದು ಕೇಳ್ತಿವಿ ಮಾಡ್ತೀವಿ ಅಂದ್ರೆ ಹೇಗೆ.? ಮೊದಲು ಯೋಜನೆಯನ್ನ ಕೈಗೆತ್ತಿಕೊಂಡು ಶುರು ಮಾಡಬೇಕು ಎಂದು ಸಲಹೆ ನೀಡಿದರು.

ಚರ್ಚೆಯೇ ಮಾಡದೆ ಸಿದ್ದರಾಮಯ್ಯ ವಿದ್ಯುತ್ ಕಾಯ್ದೆ ವಿರೋಧ ಮಾಡ್ತಿದ್ದಾರೆಂಬ ಬಿಜೆಪಿ ಟ್ವಿಟ್ ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಕೇಂದ್ರದ ರೀತಿ ಮಾಡ್ತಿಲ್ಲ ಎಂದು ಹೇಳಲಿ. ಆ ವೇಳೆ ನಾನು ವಿರೋಧವೇ ಮಾಡಲ್ಲ. ಅವರು ಹೇಳಲ್ಲ, ನಾನು ವಿರೋಧ ಮಾಡೋದು ಬಿಡಲ್ಲ ಎಂದರು.

ಸಚಿವ ಆನಂದ್ ಸಿಂಗ್ ರಾಜಿನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಇದು ಬಿಜೆಪಿ ಸಂಪುಟ ರಚನೆಯಲ್ಲಿ ಮನಸ್ತಾಪ ಇದೆ ಅನ್ನೊದನ್ನ ತೋರಿಸುತ್ತಿದೆ. ಸಂಪುಟ ರಚನೆ ವೇಳೆಯೇ ಅಸಮಾಧಾನ ಹೊಗೆಯಾಡ್ತಿತ್ತು. ಮುಂದೆ ಅದು ಜ್ವಾಲೆಯಾಗಿ ಸ್ಪೋಟ‌ ಆಗೋ ಲಕ್ಷಣ ಇದೆ. ಯಾರಿಗೆ ಸಾಮಾಜಿಕ ನ್ಯಾಯದ ಮೇಲೆ ಗೌರವ ಇಲ್ಲವೋ. ಅಂತವರ ಕೈಯಲ್ಲಿ ಉತ್ತಮ ಆಡಳಿತ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜಕೀಯ ನಿವೃತ್ತಿಗೆ ವಯಸ್ಸು ಅಡ್ಡಿ ಬರುವುದಿಲ್ಲ. ರಾಜಕೀಯದಲ್ಲಿ ಮುಂದುವರಿಯಲು ವಯಸ್ಸು ಮುಖ್ಯವಾಗುವುದಿಲ್ಲ. ರಾಜಕೀಯದಲ್ಲಿ ಮುಂದುವರಿಯಲು ಉತ್ತಮ ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮುಖ್ಯವಾಗುತ್ತದೆ. ನನಗೀಗ 75 ವರ್ಷವಾದರೂ ಚೆನ್ನಾಗಿದ್ದೇನೆ, ರಾಜಕೀಯದಲ್ಲಿ ಮುಂದುವರೆಯುವ ಆಸೆಯಿದೆ, ಹಾಗಾಗಿ ಮುಂದುವರೆದಿದ್ದೇನೆ ಎಂದರು.

ಎಲ್ಲವನ್ನೂ ನೀವೆ ಸೃಷ್ಠಿ ಮಾಡ್ಕೊಳ್ತೀರಾ.!

ಜಮೀರ್ ಜೊತೆಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡ್ರು ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಎಲ್ಲವನ್ನೂ ನೀವೆ ಸೃಷ್ಠಿ ಮಾಡ್ಕೊಳ್ತೀರಾ. ಆ ರೀತಿ ಏನೂ ಆಗಿಲ್ಲ, ಜಮೀರ್ ಅಜ್ಮೀರ್ ಗೆ ಹೋಗಿದ್ರು. ಡಿ.ಕೆ.ಶಿವಕುಮಾರ್ ಜಮೀರ್ ಭೇಟಿ ಮಾಡಿರುವ ವಿಚಾರದಲ್ಲಿ ಯಾವುದೇ ಬಣ್ಣ ಕಟ್ಟುವ ಅಗತ್ಯವಿಲ್ಲ. ಅವರು ಪಕ್ಷದ ಅಧ್ಯಕ್ಷನಾಗ ಹೋಗಿ ಭೇಟಿ ಮಾಡಿದ್ದಾರೆ ಎಂದು ಸ್ಪಷ್ಟನೆ ನಿಡಿದರು. ಜಮೀರ್ ಅನ್ನು ಮಾತನಾಡಿಸಿಲ್ವಾ ಸರ್ ಎಂಬ ಪ್ರಶ್ನೆಗೆ ಸಿದ್ಧರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ENGLISH SUMMARY…

BJP is not pro-social justice reservation: We will get a caste census report as soon as we come to power: Siddaramaiah
Mysuru, August 11, 2021 (www.justkannada.in): “We will get a caste-census report as soon as we come to power. We will submit the report for discussion and it will be our first priority if our government comes to power,” opined former Chief Minister Siddaramaiah.
Speaking to the press persons in Mysuru today the former CM said, “If we don’t get the report how do we come to know the content? I had get the caste-census done when I was in power. It was prepared when H.D. Kumaraswamy was the Chief Minister. But, when Puttarangeshetty was there he asked not to get it. However, Kumaraswamy instructed to get the report. But, I will get the report and discuss about it,” he informed.
On the occasion, he said that the BJP is not pro social justice reservation policy. Whenever this issue arose the RSS stopped it. They planned to change the constitution itself. Now they have provided reservation for upper castes. After all this the RSS agenda has change. Now they are not talking about it. If a caste-census is held we can get exact number of castes. It will help to provide special schemes for the poor in the society. They will get special opportunities. Caste-census should be held in Karnataka. The Narendra Modi government has provided 10% reservation for economically backward people. According to me it is anti-constitutional. Our constitution says reservation should be provided only for the socially and educationally backward people, he said
Keywords: Former Chief Minister Siddaramaiah/ caste-census/ report/ BJP against it

Key words: BJP – not -pro-social justice-former CM-Siddaramaiah.