ರಾಜೀವ್ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವಿಟ್ ಮಾಡಿದ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್…

Promotion

ದಕ್ಷಿಣ ಕನ್ನಡ,ಮೇ,17,2019(www.justkannada.in):  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಇದೀಗ ವಿವಾದಾತ್ಮಕ ಟ್ವಿಟ್ ಮಾಡಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜೀವ್ ಗಾಂಧಿ ಬಗ್ಗೆ ಟ್ವಿಟ್ ಮಾಡಿರುವ ಸಂಸದ ನಳೀನ್ ಕುಮಾರ್ ಕಟೀಲ್, ರಾಜೀವ್ ಗಾಂಧಿ 17 ಸಾವಿರ ಜನರನ್ನ ಕೊಂದಿದ್ದಾರೆ. ನಾಥೂರಾಮ್ ಗೂಡ್ಸೆ ಕೊಂದ ಸಂಖ್ಯೆ 1 ಹಾಗೆಯೇ  ಅಜ್ಮಲ ಕಸಾಬ್ ಗೊಂದಿದ್ದು 72 ಮಂದಿಯನ್ನ. ಈಗ ನೀವೇ ಹೇಳಿ ಇವರಲ್ಲಿ ಅತಿ ಕ್ರೂರ ಕೊಲೆಗಾರ ಯಾರು ಅಂತಾ ಎಂದು ಟ್ವಿಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಅಲ್ಲದೇ ಕೆಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು, 7 ದಶಕಗಳ ಬಳಿಕ ನಾಥುರಾಮ್ ಗೋಡ್ಸೆ ಬಗ್ಗೆ ಚರ್ಚೆಯಾಗ್ತಿದೆ. ಇಂದನ ತಲೆಮಾರು ಚರ್ಚೆ ಮಾಡ್ತಿರೋದು ಖುಷಿ ತಂದಿದೆ. ಈ ಚರ್ಚೆಯಿಂದ ನಾಥೂರಾಮ್ ಗೋಡ್ಸೆ ಗೆ ಸಂತೋಷವಾಗಬಹುದು ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

Key words: BJP MP -Nalin Kumar Kateel- controversial tweet- about- Rajiv Gandhi