ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ ಬಿಜೆಪಿ ಎಂಎಲ್ ಸಿ.

Promotion

ಬೆಂಗಳೂರು,ಜೂನ್,17,2022(www.justkannada.in):  ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಜಾತಿ ವಿಷಯದಲ್ಲಿ ನಿಂದನೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನಪರಿಷತ್ ಬಿಜೆಪಿ ಸದಸ್ಯ ಚಲವಾದಿ ನಾರಾಯಣಸ್ವಾಮಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ಎಂಎಲ್ ಸಿ ಚಲವಾದಿ ನಾರಾಯಣಸ್ವಾಮಿ, ಸಿದ್ಧರಾಮಯ್ಯ ಬಗ್ಗೆ  ಗೌರವವಿದೆ. ಆದರೆ ನನ್ನನ್ನ ನಿಂದಿಸುವ ಬರದಲ್ಲಿ ಜಾತಿಯನ್ನೂ ನಿಂದಿಸಿದ್ದಾರೆ. ನಮ್ಮದು  ಕೇವಲ ರಾಜಕೀಯ ಜಿದ್ದಾಜಿದ್ದು. ಸರ್ಕಾರದ ಅಭಿವೃದ್ದಿ ವಿಚಾರದಲ್ಲಿ ಏನು ಬೇಕಾದರೂ ಹೇಳಲಿ.  ಆದರೆ ಜಾತಿ ವಿಷಯದಲ್ಲಿ ನಿಂದನೆ ಅಪಮಾನ ಮಾಡಿದ್ದಾರೆ.

ಹೀಗಾಗಿ  ಸಿದ್ಧರಾಮಯ್ಯರನ್ನ ಜಾತಿ ನಿಂದನೆ ಕೇಸ್ ಅಡಿ ಬಂಧಿಸಬೇಕು.  ಸಿದ್ಧರಾಮಯ್ಯರನ್ನ ಬಂಧಿಸಲು ತಡ ಮಾಡಿದ್ರೆ ಧರಣಿ ಮಾಡುವೆ ಎಂದು ಚಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Key words: BJP –MLC- Caste –Abuse- case –against- former CM -Siddaramaiah