ಸಚಿವರಾದ ಎಂ.ಬಿ ಪಾಟೀಲ್ ಮತ್ತು ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ…

Promotion

ಹುಬ್ಬಳ್ಳಿ,ಮೇ,16,2019(www.justkannada.in):  ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಭ್ರಷ್ಟರು. ಬೈ ಎಲೆಕ್ಷನ್ ಗೆಲ್ಲಲು ತಲಾ 50 ಕೋಟಿ ಹಣ ಚೆಲ್ಲುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಶಾಸಕ ರೇಣುಕಾಚಾರ್ಯ, ಕುಂದಗೋಳ ಉಪಚುನಾವಣೆಯಲ್ಲಿ ಗೆಲ್ಲಲು ಡಿ.ಕೆ ಶಿವಕುಮಾರ್ 50 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಸಿಎಂ ಆಗುವ ಆಸೆಯಿಂದ ಹಣ ಚೆಲ್ಲುತ್ತಿದ್ದಾರೆ. ಅವರು ನನಗೇನು ಅಲ್ಲ. ಅವರ ಬಗ್ಗೆ ಅಯ್ಯೊ ಅನಿಸುತ್ತೆ ಎಂದು ಟಾಂಗ್ ಕೊಟ್ಟರು.

ಡಿಕೆ.ಶಿವಕುಮಾರ್ ಎಂಬಿ ಪಾಟೀಲ್ ಇಬ್ಬರು ಭ್ರಷ್ಟರು, ಡಿಕೆಶಿ ಕುಂದಗೋಳದಲ್ಲಿ ಹಣ ಚೆಲ್ಲುತ್ತಿದ್ದರೇ ಇತ್ತ ಚಿಂಚೋಳಿಯಲ್ಲಿ ಎಂಬಿ ಪಾಟೀಲ್ ಹಣ ಖರ್ಚು ಮಾಡುತ್ತಿದ್ದಾರೆ. ನಿನ್ನೆ ಒಂದು ದಿನ ಕುಂದಗೋಳದಲ್ಲಿ 5 ಕೋಟಿ ಹಂಚಿಕೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

Key words: BJP –MLA-MP Renukacharya- accused – minister -M.B. Patil –DK Shivakumar