ಶಾಸಕ ಶಿವಶಂಕರ್ ರೆಡ್ಡಿ ಕೈ ಕತ್ತರಿಸುತ್ತೇನೆಂದು ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ…

Promotion

ಚಿಕ್ಕಬಳ್ಳಾಪುರ,ನ,7,2019(www.justkannada.in):  ಬಡವರ ಮನೆ ಮೇಲೆ ಕೈ ಹಾಕಿದರೇ ಶಾಸಕ ಶಿವಶಂಕರ್ ರೆಡ್ಡಿ ಕೈ ಕತ್ತರಿಸುತ್ತೇನೆ ಎಂದು ಬಿಜೆಪಿ ಮುಖಂಡ ರವಿ ನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮಂಚೇನಹಳ್ಳಿ ತಾಲ್ಲೂಕು ಘೋಷಣೆ ವಿಚಾರವಾಗಿ  ಅನರ್ಹ ಶಾಸಕ ಡಾ.ಸುಧಾಕರ್ ಕೈ ಕತ್ತರಿಸುವುದಾಗಿ ಶಾಸಕ ಶಿವಶಂಕರ್ ರೆಡ್ಡಿ ಅವರು ಹೇಳಿಕೆ ನೀಡಿದ್ದರು.

ಈ ಸಂಬಂಧ ಚಿಕ್ಕಬಳ್ಳಾಪುರ ಗೌರಿಬಿದನೂರು  ನಗರಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ ಶಾಸಕ ಶಿವಶಂಕರರೆಡ್ಡಿಗೆ ತಿರುಗೇಟು ನೀಡಿದ್ದಾರೆ. ನದಿ ದಡದಲ್ಲಿ ಬಡವರು ಮನೆಗಳನ್ನ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಒತ್ತುವರಿ ತೆರವಿಗೆ ಮುಂದಾದರೇ, ಬಡವರ ಮನೆ ಮೇಲೆ ಕೈ ಹಾಕಿದರೇ ಶಾಸಕ ಶಿವಶಂಕರರೆಡ್ಡಿ ಕೈ ಕತ್ತರಿಸುತ್ತೇನೆ. ಶಿವ ಶಂಕರರೆಡ್ಡಿ ಸುಧಾಕರ್ ಅವರ ಕೈ ಕತ್ತರಿಸುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಶಿವಶಂಕರರೆಡ್ಡಿ ಕೈ ಕತ್ತರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

Key words: BJP leader- warned – MLA Shivshankar Reddy – cut – hand.