ಈ ಸರ್ಕಾರ ರಚನೆ ಆದಾಗಿನಿಂದಲೂ ಐಸಿಯುನಲ್ಲೇ ಇದೆ- ಹೆಚ್.ಡಿ ಕುಮಾರಸ್ವಾಮಿ ಟೀಕೆ…

Promotion

ಹಾಸನ,ಮಾರ್ಚ್,11,2021(www.justkannada.in):  ಬಿಜೆಪಿ ಸರ್ಕಾರ ರಚನೆ ಆದಾಗಿನಿಂದಲೂ ಐಸಿಯುನಲ್ಲೇ ಇದೆ.  ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.jk

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಹೇಳುತ್ತಿದ್ದರು . ನಮ್ಮ ಸರ್ಕಾರ ರಾಕ್ಷಸಿ ಸರ್ಕಾರ ಎಂದು ಟೀಕಿಸಿದ್ದರು. ನಂತರ ನಮ್ಮ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ಬಂತು.  ಇವರು ಬಂದ ಮೇಲೆ ಏನು ಅಭಿವೃದ್ದಿಯಾಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಅಭಿವೃದ್ದಿ ಕೆಲಸಗಳಾಗಿಲ್ಲ.  ಬಜೆಟ್ ನ ಮೌಲ್ಯಗಳೇ  ಕುಸಿಯುವಂತೆ ಮಾಡಿದರು. ಅಯವ್ಯಯವನ್ನ ಸ್ಪಷ್ಟವಾಗಿ ತೋರಿಸಿಲ್ಲ ಎಂದು ಕಿಡಿಕಾರಿದರು.BJP-government - ICU – since- former cm-H. D. Kumaraswamy

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಎಸ್ ಐಟಿ ತನಿಖೆ ಅವರ ರಕ್ಷಣೆಗಾಗಿ ಮಾಡಿಕೊಳ್ಳುವುದಷ್ಟೇ. ಎಸ್ ಐ ಟಿ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದರು.

Key words:  BJP-government – ICU – since- former cm-H. D. Kumaraswamy