ಡಿ.ದೇವರಾಜ ಅರಸುಗೆ ಅಗೌರವ ತೋರಿಸುತ್ತಿರುವ ಬಿಜೆಪಿ ಸರ್ಕಾರ: ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್.

Promotion

ಮೈಸೂರು,ಆಗಸ್ಟ್,19,2021(www.justkannada.in): ಕಳೆದ ಎರಡು ವರ್ಷಗಳಿಂದ ಹಿಂದುಳಿದ ವರ್ಗಗಳ ಹರಿಕಾರ ಹಾಗು ಹಿರಿಯ ರಾಜಕೀಯ ಮುತ್ಸದ್ಧಿ ದಿವಂಗತ ಡಿ.ದೇವರಾಜ ಅರಸು ಅವರ ಪ್ರಶಸ್ತಿ ನೀಡದೆ ಬಿಜೆಪಿ ಸರ್ಕಾರ ಅರಸು ಹಾಗು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಪ್ರತಿವರ್ಷ ಸಮಿತಿ ರಚಿಸಿ ಅರಸು ಪ್ರಶಸ್ತಿ ನೀಡುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರಶಸ್ತಿ ನೀಡಲಿಲ್ಲ.

ನಾಳೆ‌ ಅರಸು ಅವರ 106 ನೇ ಜನ್ಮದಿನಾಚರಣೆ ನಡೆಯುತ್ತಿದೆ. ಈ ಸಂಧರ್ಭದಲ್ಲಿ ಆದರೂ   ಪ್ರಶಸ್ತಿ ನೀಡುವ ಮೂಲಕ ಅರಸು ಅವರಿಗೆ ‌ಗೌರವ ಸಲ್ಲಿಸುವ ಔದಾರ್ಯ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೋರಬೇಕೆಂದು ಹೆಚ್.ಎ ವೆಂಕಟೇಶ್ ‌ಆಗ್ರಹಪಡಿಸಿದ್ದಾರೆ.

Key words: BJP government- disrespecting -D. Devaraja arsu-KPCC spokesperson -HA Venkatesh.