ನಾಲ್ಕು ರಾಜ್ಯಗಳಲ್ಲಿ ಬಿಜೆಪಿ, ಒಂದು ರಾಜ್ಯದಲ್ಲಿ ಆಪ್ ಮುನ್ನಡೆ: ಪಂಜಾಬ್ ನಲ್ಲಿ ಸಿಎಂ ಸೇರಿ 12 ಸಚಿವರಿಗೆ ಹಿನ್ನೆಡೆ.

ನವದೆಹಲಿ,ಮಾರ್ಚ್,10,2022(www.justkannada.in): ಉತ್ತರ ಪ್ರದೇಶ, ಪಂಜಾಬ್​, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಪಂಚರಾಜ್ಯಗಳ ಚುನಾವಣೆಯ  ಫಲಿತಾಂಶ ಹೊರಬೀಳುತ್ತಿದ್ದು ಈ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಒಂದು ರಾಜ್ಯದಲ್ಲಿ ಆಪ್ ಮುನ್ನಡೆ ಸಾಧಿಸಿದೆ.

ಉತ್ತರ ಪ್ರದೇಶ, ಉತ್ತರಖಂಡ್ ನಲ್ಲಿ ಬಿಜೆಪಿ  ಮ್ಯಾಜಿಕ್ ನಂಬರ್ ದಾಟಿದ್ದು ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಗೋವಾದಲ್ಲಿ ಕಾಂಗ್ರಸ್ ಮತ್ತು ಬಿಜೆಪಿ ನಡುವೆ ಫೈಟ್ ನಡೆಯುತ್ತಿದ್ದು ಹಾವು ಏಣಿ ಆಟದಲ್ಲಿ ಯಾರು ಮ್ಯಾಜಿಕ್ ನಂಬರ್ ದಾಟಲಿದ್ದಾರೆ ಕಾದು ನೋಡಬೇಕಿದೆ.

ಇನ್ನು ಮಣಿಪುರದಲ್ಲಿ  60 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ, 17 ಕಾಂಗ್ರೆಸ್, ಇತರೆ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 31 ಮ್ಯಾಜಿಕ್ ನಂಬರ್ ಆಗಿದ್ದು ಏನಾಗುತ್ತದೆ ಎಂಬುದನ್ನ ಕಾದುನೋಡಬೇಕಿದೆ.  ಇನ್ನು ಪಂಜಾಬ್ ನಲ್ಲಿ 89 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಎಎಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಪಂಜಾಬ್ ಸಿಎಂ ಚಿನ್ನಿ ಸೇರಿ 12 ಸಚಿವರು ಹಿನ್ನಡೆ ಅನುಭವಿಸಿದ್ದಾರ.  ಐದು ರಾಜ್ಯಗಳ ಫಲಿತಾಂಶ ಹಿಗಿದೆ.

ಉತ್ತರ ಪ್ರದೇಶ: ಬಿಜೆಪಿ 268, ಎಸ್ಪಿ 112, ಬಿಎಸ್ಪಿ 6, ಕಾಂಗ್ರೆಸ್ 4, ಇತರೇ 3 ಕ್ಷೇತ್ರಗಳಲ್ಲಿ ಮುನ್ನಡೆ. ಮ್ಯಾಜಿಕ್ ನಂಬರ್ 202.

ಉತ್ತರಖಂಡ್: ಬಿಜೆಪಿ 45, ಕಾಂಗ್ರೆಸ್ 21, ಇತರೆ 4ರಲ್ಲಿ ಮುನ್ನಡೆ. ಮ್ಯಾಜಿಕ್ ನಂಬರ್ 36

ಮಣಿಪುರ: ಬಿಜೆಪಿ 24,ಕಾಂಗ್ರೆಸ್ 17, ಇತರೆ 19ರಲ್ಲಿ ಮುನ್ನಡೆ. ಮ್ಯಾಜಿಕ್ ನಂಬರ್ 31

ಗೋವಾ: ಬಿಜೆಪಿ 18,ಕಾಂಗ್ರೆಸ್ 12 ಆಪ್ 1, ಇತರೆ 9ರಲ್ಲಿ ಮುನ್ನಡೆ  ಮ್ಯಾಜಿಕ್ ನಂಬರ್ 21

ಪಂಜಾಬ್: ಕಾಂಗ್ರೆಸ್ 13, ಎಎಪಿ 89, ಎಸ್ಎಡಿ  7, ಬಿಜೆಪಿ 5, ಇತರೆ 3ರಲ್ಲಿ ಮುನ್ನಡೆ. ಮ್ಯಾಜಿಕ್ ನಂಬರ್ 59

Key words: BJP –five- states- election-result