ರಾಗಿಗುಡ್ಡ ಗಲಭೆಗೆ ಬಿಜೆಪಿಯೇ ಪಿತಾಮಹ- ಕೃಷಿ ಸಚಿವ ಚಲುವರಾಯಸ್ವಾಮಿ.

Promotion

ಮಂಡ್ಯ,ಅಕ್ಟೋಬರ್,5,2023(www.justkannada.in): ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಬಿಜೆಪಿಯೇ ಪಿತಾಮಹ ಎಂದು ಕೃಷಿ ಚಲುವರಾಯಸ್ವಾಮಿ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ರಾಜ್ಯದಲ್ಲಿ ನಡೆಯುವ ಗಲಾಟೆಗಳಿಗೆ ಬಿಜೆಪಿಯೇ ಪಿತಾಮಹ. ಗಲಾಟೆ ಹಿಂದೆ  ಆರ್ ಎಸ್ ಎಸ್, ಬಜರಂಗದಳದ ಕೈವಾಡ ಇದೆ.  ಗಲಾಟೆ ಹುಟ್ಟುವುದು ಆರ್ ಎಸ್ ಎಸ್ ಹಿನ್ನೆಲೆಯಲ್ಲಿ. ಆರ್ ಎಸ್ ಎಸ್ ಮತ್ತು ಬಜರಂಗದಳದಲ್ಲಿ ಒಳ್ಳೆಯವರಿದ್ದಾರೆ. ಆದರೆ ಎರಡು ಸಂಘಟನೆಗಳನ್ನ ರಾಜಕಾರಣದ ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಜೆಪಿ ತನಗೆ ಬೇಕಾದ ರೀತಿ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words: BJP – father- Ragigudda riot – Agriculture Minister -Chaluvarayaswamy.