ಬಿಜೆಪಿ ಪಾಲಾದ ದಾವಣಗೆರೆ ಮಹಾನಗರ ಪಾಲಿಕೆ: ‘ಕೈ’ಗೆ ಮುಖಭಂಗ…

Promotion

ದಾವಣಗೆರೆ,ಫೆ,19,2020(www.justkannada.in): ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಬಿಜೆಪಿ ಜಯ ಸಾಧಿಸಿದೆ ಅಧಿಕಾರದ ಗದ್ದುಗೆ ಹಿಡಿದೆ. ಈ ಮೂಲಕ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್, ಉಪಮೇಯರ್ ಸೌಮ್ಯಾ ಆಯ್ಕೆ ಆಗಿದ್ದಾರೆ. ದಾವಣಗೆರೆ  ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17,ಜೆಡಿಎಸ್ 1 ಹಾಗೂ ಇತರೆ 5 ಸದಸ್ಯರಿದ್ದಾರೆ.

ಕಾಂಗ್ರೆಸ್ಬಹುದೊಡ್ಡಪಕ್ಷವಾದ್ರೂ ಅಧಿಕಾರ ಗಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನು ಚುನಾವಣೆಯನ್ನ ಬಹಿಷ್ಕರಿಸಿ ಕಾಂಗ್ರೆಸ್ ಹೊರ ನಡೆಯಿತು. ಕಾಂಗ್ರೆಸ್ ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಬಿ.ಜೆ. ಅಜಯ್ ಕುಮಾರ್, ಕಾಂಗ್ರೆಸ್ ಪಕ್ಷದಿಂದ ದೇವರಮನಿ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದರು.

Key words: BJP- Davanagere-city corporation- Congress – disillusionment