ಬಿಜೆಪಿಯವರಿಂದ ದ್ವೇಷದ ರಾಜಕಾರಣ: ಅವರ ಪಾಪದ ಕೊಡ ತುಂಬಿದೆ – ಮಾಜಿ ಸಿಎಂ ಸಿದ‍್ಧರಾಮಯ್ಯ ವಾಗ್ದಾಳಿ.

Promotion

ಬೆಳಗಾವಿ,ಜನವರಿ,11,2023(www.justkannada.in):  ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರ ಪಾಪದ ಕೊಡ ತುಂಬಿದೆ. ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಬೆಳಗಾವಿಯಲ್ಲಿ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ಬಳಿಕ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಪಾಪದ ಪುರಾಣವನ್ನ ಜನರ ಮುಂದಿಡುತ್ತೇವೆ. ಸರ್ಕಾರ ಭ್ರಷ್ಟಾಚಾರ ದುರಾಡಳಿತ ಮಾಡುತ್ತಿದೆ ದ್ವೇಷದ ರಾಜಕಾರಣ ಮಾಡುತ್ತಿದೆ. ಅವರನ್ನ ಪ್ರಶ್ನೆ ಮಾಡಿದರೇ ನಮ್ಮ ಮೇಲೆ ಕೇಸ್ ಹಾಕುತ್ತಾರೆ.  ಇದು ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಜನರು ದೈರ್ಯದಿಂದ ಬದುಲು ಆಗುತ್ತಿಲ್ಲ ಎಲ್ಲರೂ ಆತಂಕದಿಂದ ಬದುಕುತಿದ್ದಾರೆ.  ಇವರ ಪಾಪದ ಕೊಡ ತುಂಬಿದೆ. ಪಾಪದ ಕೊಳೆ ತೊಳೆಯಲು ಪೊರಕೆ ಹಿಡಿದಿದ್ದೇವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದೇವೆ ಎಂದರು.

Key words: BJP-bribe-protest-congress-  Former CM -Siddhiramaiah