ಜೆಡಿಎಸ್ ಗಾಗಿ ಹೊರಟ್ಟಿ ಏನು ಮಾಡಿಲ್ಲ: ತಮ್ಮ ಗೆಲುವಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿರುವುದು ಗೊತ್ತು- ಮಾಜಿ ಸಿಎಂ ಹೆಚ್.ಡಿಕೆ ಕಿಡಿ

Promotion

ಬೆಂಗಳೂರು,ಜೂನ್,6,2022(www.justkannada.in):  ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ವಿಧಾನಪರಿಷತ್ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಕಟ್ಟಲು ಬ್ಯಾಟಿಂಗ್ ಬೌಲಿಂಗ್ ಫಿಲ್ಡಿಂಗ್ ಎಲ್ಲವನ್ನೂ ಮಾಡಿದ್ದೇನೆ. ಜೆಡಿಎಸ್ ಗಾಗಿ ಬಸವರಾಜ ಹೊರಟ್ಟಿ ಏನು ಮಾಡಿಲ್ಲ.  ನಮ್ಮಿಂದ ಎಲ್ಲ ಪಡೆದು ಹೋದ ಮೇಲೆ ಮಾತನಾಡುತ್ತಿದ್ದಾರೆ  ತಮ್ಮ ಗೆಲುವಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿರುವುದು ಗೊತ್ತು ಎಂದು ಲೇವಡಿ ಮಾಡಿದರು.

ಜೆಡಿಎಸ್ ನಾಶ ಮಾಡಲು ಸಾಧ್ಯವೇ ಇಲ್ಲ. ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತಿದೆ.  ಜೆಡಿಎಸ್ ತೊರೆದವರಿಂದ ಪಕ್ಷ ನಾಶ ಅಸಾಧ್ಯ ಎಂದು ಹೆಚ್.ಡಿಕೆ ಪಕ್ಷತೊರದವರಿಗೆ ಚಾಟಿ ಬೀಸಿದರು.

ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.  ತಪ್ಪುಗಳಿದ್ದರೇ ತಿದ್ದುವುದಾಗಿ ಸರ್ಕಾರ ಹೇಳಿದೆ .ಕಾಂಗ್ರೆಸ್   ಹಿಂದೂ ಮತಬೇಡ ಎನ್ನುವ ಹಂತಕ್ಕೆ ಬಂದಿದೆ. ಮುಸ್ಲಿಂರ ಒಲೈಕೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೆಚ್.ಡಿಕೆ ಹರಿಹಾಯ್ದರು.

Key words: bjp –Basavaraja horatti-JDS-  Former CM-HD Kumaraswamy