ಕೇಂದ್ರದಲ್ಲಿ ಬಿಜೆಪಿ 1ವರ್ಷ ಪೂರೈಸಿದ ಹಿನ್ನೆಲೆ: ಪ್ರಧಾನಿ ಮೋದಿಯನ್ನ ಹಾಡಿಹೊಗಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…

BJP- 1 year- fulfillment -BJP President- Nalin Kumar Katil - -Prime Minister Modi.
Promotion

ಮೈಸೂರು,ಜೂ,1,2020(www.justkannada.in): ಕೇಂದ್ರದಲ್ಲಿ ಬಿಜೆಪಿ 1ವರ್ಷ ಪೂರೈಸಿದ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಪ್ರಧಾನಿ ಮೋದಿ ಅವರನ್ನ ಹಾಡಿ ಹೊಗಳಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್. ಪೌರತ್ವ ಬಯಸಿ ಬಂದವರಿಗೆ ಪೌರತ್ವ ನೀಡುವ ಕೆಲಸ‌ ನಾವು ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಅತ್ಯುತ್ತಮ ಕೆಲಸ. ನಾವು ಜಮ್ಮು ಕಾಶ್ಮೀರದಲ್ಲಿ ಕಟ್ಟು ನಿಟ್ಟು ಮಾಡಿದ ಬಳಿಕ ಯಾರು ಇಲ್ಲಿಗೆ ಬಂದಿಲ್ಲ. ಬಂದು ಬಾಂಬ್ ಇಡುವ ಕೆಲಸ‌ ಮಾಡಿಲ್ಲ. ಈ‌ ಮೊದಲು ವಿಜ್ಞಾನ ಭವನಕ್ಕೆ ಬಂದು ಬಾಂಬ್ ಇಡುವ ಕೆಲಸ ಆಗಿತ್ತು. ಕೇರಳಕ್ಕೆ ಬಂದು ಬಾಂಬ್ ಇಡುವ ಕೆಲಸ ಮಾಡಿದ್ದಾರೆ. ಇದೀಗ ಒಂದೇ ಒಂದು ಬಾಂಬ್ ಇಡುವ ಕೆಲಸ‌ ಆಗಿಲ್ಲ. ಇದೆಲ್ಲವು ನಮ್ಮ ಸರ್ಕಾರದ ಕಾರ್ಯವೈಖರಿ ಎಂದು ಶ್ಲಾಘಿಸಿದರು.

20ಲಕ್ಷ ಕೋಟಿಯನ್ನ ದೇಶಕ್ಕೆ ನೀಡಲಾಗಿದೆ. ಆತ್ಮನಿರ್ಭರ್ ಯೋಜನೆ ಮೂಲಕ ಜನರ ಜೊತೆ ನಾವು ಇದ್ದೇವೆ. ತಳವಾರ, ಪರಿವಾರ ಸಮುದಾಯಕ್ಕೂ ಅನುಕೂಲ‌ ಮಾಡಿ ಕೊಟ್ಟಿದೆ. ಎಲ್ಲ ವಿಚಾರದಲ್ಲು ನಾವು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇವೆ. ಕೇಂದ್ರದ ಜೊತೆಗೆ ರಾಜ್ಯದಲ್ಲಿಯು ಅತ್ಯುತ್ತಮ ಕೆಲಸ ಆಗಿದೆ ಎಂದು ಹೇಳಿದರು.

ವಿರೋಧ ಪಕ್ಷಗಳಿಂದ ಚಿಲ್ಲರೆ ರಾಜಕಾರಣ….

ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡಿದ್ದಾರೆ. ಇದು ಚಿಲ್ಲರೆ ರಾಜಕಾರಣ ಮಾಡುವ ಸಮಯವಲ್ಲ. ವಿರೋಧ ಪಕ್ಷಗಳಿಗೆ ಟೀಕೆ ಮಾಡೋದಕ್ಕೆ ಸರಿಯಾದ ವಿಷಯ ಇಲ್ಲ. ಹೀಗಾಗಿ ವಲಸೆ ಕಾರ್ಮಿಕರನ್ನ ಎತ್ತುಕಟ್ಟುವ ಕೆಲಸ ಮಾಡ್ತಿದ್ದಾರೆ. ನಾವು ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೊಂಡಿದ್ದೇವೆ. ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಹ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿದೆ. ಇದೀಗ ಟೀಕೆ ಮಾಡೋದಕ್ಕೆ ಅಸ್ತ್ರ ಇಲ್ಲ ಅಂತ ಚಿಲ್ಲರೆ ರಾಜಕಾರಣ ಮಾಡ್ತಿದೆ ಎಂದು ವಿರೋಧ‌ ಪಕ್ಷದ ವಿರುದ್ಧ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

Key words: BJP- 1 year- fulfillment -BJP President- Nalin Kumar Katil – -Prime Minister Modi.