ಬಿಟ್ ಕಾಯಿನ್ ದಂಧೆ ವಿಚಾರ: ದಿ.ರಾಕೇಶ್ ಸಿದ್ಧರಾಮಯ್ಯ ಹೆಸರು ಮುನ್ನೆಲೆಗೆ ತಂದ ಬಿಜೆಪಿ ವಿರುದ್ಧ ಆಕ್ರೋಶ

Promotion

ಮೈಸೂರು,ನವೆಂಬರ್,19,2021(www.justkannada.in):  ಬಿಟ್ ಕಾಯಿನ್ ದಂಧೆ ಆರೋಪಿ ಶ್ರೀಕಿ ಸ್ನೇಹಿತರ ಜತೆಗಿದ್ಧ ದಿ.ರಾಕೇಶ್ ಸಿದ್ಧರಾಮಯ್ಯ ಅವರ ಫೋಟೊವನ್ನ ಟ್ವೀಟ್ ಮಾಡಿದ್ಧ ಬಿಜೆಪಿ ವಿರುದ್ಧ ದಿ.ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ದಿ.ರಾಕೇಶ್ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಮನೋಜ್ ಎಂಬುವವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು,  ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ ಇಂದು ಬಿಟ್ ಕಾಯಿನ್ ದಂಧೆ ಪಾಪಸು ಕಳ್ಳಿಯಂತೆ ಬೆಳೆದಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಮತ್ತು ಇಡೀ ಪ್ರಕರಣಕ್ಕೆ ಇತಿಶ್ರೀ ಹೇಳುವ ಸಲುವಾಗಿ ಮತ್ತು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸಲಾರದ ಬಿಜೆಪಿಗರು ಸಿದ್ದರಾಮಯ್ಯ ಅವರ ಮಗ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರನ್ನು ಮುನ್ನೆಲೆಗೆ ತಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.

ಸಾವಿನ ಮನೆಯ ಸಂಕಟ ಅರಿಯದ ಬಿಜೆಪಿಗರು.

ಸಾವಿನ ಮನೆಯ ಸಂಕಟ ಅರಿಯದ ಬಿಜೆಪಿಗರು ತಮ್ಮ ಮನೆಯಲ್ಲಿ ಸಾವು ಸಂಭವಿಸುವುದಿಲ್ಲ ಎಂದು ಭಾವಿಸಿರುವುದು ಭ್ರಮೆಯೇ ಸರಿ. ಬಿಜೆಪಿಗರು ತಮ್ಮ ಸ್ವಾರ್ಥಕ್ಕಾಗಿ ಕುಟುಂಬವೊಂದರ ಸಂಕಟವನ್ನು ತಮ್ಮ ರಾಜಕೀಯ ಸರಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇನೆ. ಒಂದು ವೇಳೆ ಈ ಪ್ರಕ್ರಿಯೆ ಮುಂದುವರಿಯುವುದೇ ಆದಲ್ಲಿ ಇಡೀ ರಾಜ್ಯದಲ್ಲೇ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: Bit coin-threading- issue- Rakesh Siddaramaiah’s -name – outrage-against-bjp