ಹಕ್ಕಿಜ್ವರ ಭೀತಿ ಹಿನ್ನೆಲೆ: ಮೈಸೂರಿನಲ್ಲಿ ಹೈ ಅಲರ್ಟ್….

ಮೈಸೂರು,ಜನವರಿ,5,2021(www.justkannada.in):  ಹಿಮಾಚಲ, ಮಹಾರಾಷ್ಟ್ರ,ಕೇರಳಾದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆ, ಮೈಸೂರಿನಲ್ಲಿ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದ್ದು,  ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾ ಇಟ್ಟಿದೆ.bird-flue-maharastra-kerala-migratory-birds-mysore-intensive-care

ವಲಸಿ ಹಕ್ಕಿಗಳು ಬರುವ ಕಡೆ ಸಿಬ್ಬಂದಿ ಗಸ್ತಿಗೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಡಿಸಿಎಫ್ ಪ್ರಶಾಂತ್ ಕುಮಾರ್, ನಮಗೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ನೀಡಿದ್ದಾರೆ. ಅದರಂತೆ ಮೈಸೂರು ಭಾಗದಲ್ಲೂ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ರಂಗನತಿಟ್ಟು, ಮೈಸೂರು ಮೃಗಾಲಯ ಹಾಗೂ ಕೆರೆಗಳಲ್ಲಿ ನಿಗಾ ಇಡಲಾಗುತ್ತಿದೆ.ರಂಗನನತಿಟ್ಟುಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಮಾಡಬೇಕಾ…? ಇಲ್ಲವಾ ಎಂಬುದರ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚಿರ್ಚೆ ಬಳಿಕ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.bird-flue-maharastra-kerala-migratory-birds-mysore-intensive-care

ಮೈಸೂರಿನಲ್ಲಿ ಈ ಹಿಂದೆ ಎರಡು ಹಕ್ಕಿಗಳು ಮೃತಪಟ್ಟಿದ್ದವು.  ಅವುಗಳನ್ನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಲ್ಯಾಬ್ ನಲ್ಲಿ ನೆಗಿಟಿವ್ ವರದಿ ಬಂದಿದೆ. ಸದ್ಯ ಯಾವುದೇ ಆತಂಕ ಇಲ್ಲ ಎಂದು ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

English summary….

Bird flu fear: Watch on migrant birds in Mysuru
Mysuru, Jan. 05, 2021 (www.justkannada.in): The Forest Department which is on a high alert in Mysuru following reports of signs of bird flu in Himachal Pradesh, Maharashtra and Kerala, has kept a keen eye on migrant birds.
The Forest Officers have given instructions to the staff to watch the migrant birds. Prashanth Kumar, Deputy Conservator of Forests, Mysuru has informed that the department has received guidelines from the Govt. of India, and accordingly precautionary measures are being taken in Mysuru region. Therefore, birds that come from other places are being watched in Ranganathittu, Mysuru Zoo and the lakes in Mysuru. A decision prohibiting the entry of visitors to the famous Ranganathittu Bird Sanctuary is still under contemplation.bird-flue-maharastra-kerala-migratory-birds-mysore-intensive-care
DCF Prashanth Kumar also informed that two birds had died in Mysuru a few days ago and the lab reports were negative and there is no need to panic.
Keywords: Bird flu/ DCF/ Forest Department/ Ranganathittu/ migrant birds

Key words: bird flu- maharastra-kerala-migratory birds – Mysore- Intensive care.