ಬೈಕ್ ಆಂಬ್ಯುಲೆನ್ಸ್ ಸೇವೆ ಕೈ ಬಿಟ್ಟ ಆರೋಗ್ಯ ಇಲಾಖೆ.

Promotion

ಬೆಂಗಳೂರು,ಸೆಪ್ಟಂಬರ್,27,2022(www.justkannada.in): ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತಾಗಿ ಸೇವೆ ಒದಗಿಸುವ ಉದ್ಧೇಶದಿಂದ ಜಾರಿ ಮಾಡಲಾಗಿದ್ಧ ಬೈಕ್ ಆಂಬ್ಯುಲೆನ್ಸ್ ಸೇವೆಯನ್ನು  ರಾಜ್ಯ ಆರೋಗ್ಯ ಇಲಾಖೆ ಕೈಬಿಟ್ಟಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ರಾಜ್ಯದಲ್ಲಿ 108  ಅಂಬ್ಯುಲೆನ್ಸ್  ಹೆಚ್ಚಿವೆ. ಆದಷ್ಟು ಬೇಗ ಸ್ಥಳಕ್ಕೆ 108 ಆಂಬ್ಯುಲೆನ್ಸ್  ತಲುಪಲಿದೆ.  ಹಾಗಾಗಿ ಬೈಕ್ ಆಂಬ್ಯುಲೆನ್ಸ್ ಗಳ ಅವಶ್ಯಕತೆ ಇಲ್ಲ.

ಇನ್ಮುಂದೆ ರಾಜ್ಯದಲ್ಲಿ ಬೈಕ್ ಅಂಬ್ಯುಲೆನ್ಸ್ ಬಳಕೆ ಇರುವುದಿಲ್ಲ ಎಂದು ರಂದೀಪ್ ತಿಳಿಸಿದ್ದಾರೆ.  ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೈಕ್ ಆಂಬ್ಯುಲೆನ್ಸ್ ಗಳನ್ನ ಪರಿಚಯಿಸಲಾಗಿತ್ತು.

Key words: Bike ambulance- service -abandoned – health department.