ಅಪ್ಪನಿಗೆ ಕೋವಿಡ್: ಶ್ರುತಿ ಹಾಸನ್​’ಗೆ ಬಿಗ್ ಬಾಸ್ ನಿರೂಪಣೆ ಜವಾಬ್ದಾರಿ !?

Promotion

ಬೆಂಗಳೂರು, ನವೆಂಬರ್ 26, 2021 (www.justkannada.in): ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ಅವರಿಗೆ ಬಿಗ್ ಬಾಸ್ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ.

ನಟ ಕಮಲ್​ ಹಾಸನ್​ (Kamal Hassan) ಅವರಿಗೆ ಕೊವಿಡ್​ (Covid 19) ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಚೇತರಿಸಿಕೊಂಡು ಮರಳುವವರೆಗೆ ಬಿಗ್ ಬಾಸ್ ನಿರೂಪಣೆ ಜವಾಬ್ದಾರಿ ಶ್ರುತಿ ಅವರಿಗೆ ನೀಡಲಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಶ್ರುತಿ ಅವರಿಗೂ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ, ಶ್ರುತಿ ಅವರನ್ನೇ ನಿರೂಪಣೆಗೆ ಕರೆತರಲು ವಾಹಿಸಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಾಹಿನಿ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಮಲ್ ಹಾಸನ್ ಕೊರೊನಾದಿಂದ ಗುಣಮುಖರಾದರೂ ಏಕಾಏಕಿ ಸಿನಿಮಾ ಕೆಲಸಗಳಿಗೆ ತೆರಳೋಕೆ ಸಾಧ್ಯವಾಗುವುದಿಲ್ಲ. ಸ್ವಲ್ಪ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ, ವಾಹಿನಿಯವರು ಪರ್ಯಾಯ ವ್ಯವಸ್ಥೆ ಹುಡುಕಿದ್ದಾರೆ.