ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್:  ಉಲ್ಟಾ ಹೊಡೆದ ಸಂತ್ರಸ್ತ ಯುವತಿ……

Promotion

ಬೆಂಗಳೂರು,ಏಪ್ರಿಲ್,12,2021(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ  ರಾಸಲೀಲೆ ಸಿಡಿ ಪ್ರಕರಣಕ್ಕೆ  ಇದೀಗ ಸ್ಫೊಟಕ ತಿರುವು ಸಿಕ್ಕಿದೆ. ಹೌದು ಸಂತ್ರಸ್ತ ಯುವತಿ ಉಲ್ಟಾ ಹೊಡೆದಿದ್ದು, ಕಿಂಗ್ ಪಿನ್ಸ್ ವಿರುದ್ಧ ಹನಿಟ್ಯ್ರಾಪ್ ಆರೋಪ ಮಾಡಿದ್ದಾರೆ.Lalitamahal Palace,Near,Cut down,tree,Helipad,Build,No need,MP,Pratap simha,NOTE 

ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಸಂತ್ರಸ್ತ ಯುವತಿ ಇದೀಗ ಇಡೀ ಪ್ರಕರಣದ ಬಗ್ಗೆ ಉಲ್ಟಾ ಹೊಡೆದಿದ್ದು, ನನ್ನನ್ನು ಹನಿಟ್ರ್ಯಾಪ್ ಬಳಸಿಕೊಂಡು ಈ ರೀತಿಯ ಕೃತ್ಯವೆಸಗಿದ್ದಾರೆ. ಕಿಂಗ್ ಪಿನ್ ಗಳಾದ ಮಾಜಿ ಪತ್ರಕರ್ತ ನರೇಶ್ ಹಾಗೂ ಶ್ರವಣ್ ಹನಿಟ್ರ್ಯಾಪ್ ಗೆ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ

ರಮೇಶ್ ಜಾರಕಿಹೊಳಿ ವಿರುದ್ಧ ಹೇಳಿಕೆ ಪೂರ್ಣ ಸತ್ಯ ಅಲ್ಲ.  ನರೇಶ್ ಶ್ರವಣ್ ನನ್ನನ್ನ  ಆ ರೀತಿ ಬಳಸಿಕೊಂಡರು. ಈ ಹಿಂದೆ ನಾನು ಒತ್ತಡದಿಂದ ಹೇಳಿಕೆ ಕೊಟ್ಟಿದ್ದೆ ಎಂದು ಎಸ್ ಐಟಿ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. Big twist - Ramesh jarakiholi -CD case-victim - young woman u turn

ಸಿಡಿ ಲೇಡಿ ಈಗ ನೀಡಿದ ಹೇಳಿಕೆ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಮತ್ತೊಮ್ಮೆ ಯುವತಿಯನ್ನು ಜಡ್ಜ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಕೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Big twist – Ramesh jarakiholi -CD case-victim – young woman u turn