ಮಹಾರಾಷ್ಟ್ರ ರೆಬಲ್ ಶಾಸಕರಿಗೆ ಬಿಗ್ ರಿಲೀಫ್: ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಸೂಚಿಸಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್.

ನವದೆಹಲಿ,ಜೂನ್,27,2022(www.justkannada.in):  ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಿವಸೇನೆ ರೆಬಲ್ ಶಾಸಕರಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಹೌದು, ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಸೂಚನೇ ನೀಡಿ ಮಹಾರಾಷ್ಟ್ರ ಸರ್ಕಾರ ಡೆಪ್ಯೂಟಿ ಸ್ಪೀಕರ್ ಗೆ ಸುಪ್ರೀಂಕೋರ್ಟ್  ನೋಟೀಸ್ ಜಾರಿ ಮಾಡಿದೆ.

ಏಕನಾಥ್ ಶಿಂಧೆ ಮತ್ತು ಇತರ 15 ಭಿನ್ನಮತೀಯ ಶಾಸಕರು ಬಂಡಾಯ ಪಾಳಯಕ್ಕೆ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ವಿಧಾನಸಭೆ ಉಪಸಭಾಧ್ಯಕ್ಷ ನರಹರಿ ಜಿರ್ವಾಲ್ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ನೋಟಿಸ್ ಗೆ ಉತ್ತರಿಸಲು 5 ದಿನಗಳ ಕಾಲಾವಕಾಶ ನೀಡಿದೆ.

ಅಲ್ಲದೆ ಶಾಸಕರ ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಿರುವ ಸುಪ್ರೀಂಕೋರ್ಟ್  ವಿಚಾರಣೆಯನ್ನ ಜುಲೈ 11ಕ್ಕೆ ಮುಂದೂಡಿದೆ.

Key words: Big relief -Maharashtra -Rebel –MLAs- Supreme Court