ಸ್ಯಾಂಡಲ್’ವುಡ್ ಗಮನ ಸೆಳೆಯಲು ಭಾರತಿ ವಿಷ್ಣುವರ್ಧನ್ ‘ಬಾಳೆ ಬಂಗಾರ’ ರೆಡಿ!

Promotion

ಬೆಂಗಳೂರು, ಆಗಸ್ಟ್ 16, 2021 (www.justkannada.in): ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯ ಚಿತ್ರ ಸ್ಯಾಂಡಲ್ ವುಡ್’ನಲ್ಲಿ ಗಮನ ಸೆಳೆದಿದೆ.

ಹೌದು, ಹಿರಿಯ ನಟಿ, ಪದ್ಮ ಪ್ರಶಸ್ತಿ ಪುರಸ್ಕೃತೆ ಭಾರತಿ ಅವರ ‘ಬಾಳೆ ಬಂಗಾರ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಟ್ರೈಲರ್ ಲಾಂಚ್ ಆಗಿದೆ.

ಅನಿರುದ್ಧ್ ಪರಿಕಲ್ಪನೆ, ಸಂಶೋಧನೆ, ನಿರೂಪಣೆ, ನಿರ್ದೇಶನ ಮಾಡಿ, ಕೀರ್ತಿ ಇನ್ನೋವೇಶ್ ಬ್ಯಾನರ್ ನಲ್ಲಿ ‘ಬಾಳೆ ಬಂಗಾರ’ ನಿರ್ಮಿಸಿದ್ದಾರೆ.

ನಿನ್ನೆ ಭಾರತಿ ವಿಷ್ಣುವರ್ಧನ್ ಜನ್ಮದಿನ ನಿಮಿತ್ತ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ನಟ ಶಿವರಾಂ, ನಿರ್ದೇಶಕ ಭಗವಾನ್, ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಭಾರತಿ ವಿಷ್ಣುವರ್ಧನ್ ಜೊತೆ ನಟಿಸಿದ ಅನೇಕ ದಿಗ್ಗಜ ಕಲಾವಿದರು, ತಂತ್ರಜ್ಞರು ಅವರ ಕುರಿತಾದ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.