ಭಾಮಾ ಹರೀಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ: ಸಾರಾ ಗೋವಿಂದು ಬಣಕ್ಕೆ ನಿರಾಸೆ

Promotion

ಬೆಂಗಳೂರು, ಮೇ 29, 2022 (www.justkannada.in): ನಿರ್ಮಾಪಕರಾದ ಭಾಮಾ ಹರೀಶ್  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ವರ್ಷದ ವಾರ್ಷಿಕ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 12 ಗಂಟೆಗೆ ಹೊರಬಿದ್ದಿದೆ.

ಚುನಾವಣೆಯಲ್ಲಿ ನಿರ್ಮಾಪಕರಾದ ಭಾಮಾ ಹರೀಶ್​ ಮತ್ತು ಸಾರಾ ಗೋವಿಂದು ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಕೊನೆಗೂ ಭಾಮಾ ಹರೀಶ್​ ಬಣಕ್ಕೆ ಭರ್ಜರಿ ಜಯ ದೊರಕಿದ್ದು, ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆಯಾಗಿದ್ದಾರೆ.

ಭಾಮಾ ಹರೀಶ್ ಮತ್ತು ಸಾರಾ ಗೋವಿಂದು ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ 410 ಮತಗಳ ಅಂತರದಿಂದ ಭಾಮಾ ಹರೀಶ್​ ಜಯಭೇರಿ ಬಾರಿಸಿದ್ದಾರೆ. ಸಾರಾ ಗೋವಿಂದು 371 ಮತ ಗಳಿಸಿದರೆ, ಭಾಮಾ ಹರೀಶ್​ 781 ಮತ ಪಡೆದರು.