ತ್ಯಾಜ್ಯ ನಿರ್ವಹಣೆ ಮಾರ್ಗವನ್ನು ಹೇಳಿಕೊಡುತ್ತದೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್…

Promotion

ಬೆಂಗಳೂರು:ಆ-23:(www.justkannada.in) ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಸಿಟಿಜನ್ ಫೋರಂ ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆ ಮತ್ತು ಮಿಶ್ರಗೊಬ್ಬರ ತಯಾರಿಸುವ ವಿಧಾನವನ್ನು ವಿವರಿಸುವ ನಿಟ್ಟಿನಲ್ಲಿ ಕೇಂದ್ರವನ್ನು ಸ್ಥಾಪಿಸಿದೆ.

ನಗರದಲ್ಲಿ ಹೆಚ್ಚುತ್ತಿರುವ ಘನತ್ಯಾಜ್ಯ ನಿರ್ವಹಣೆ ಮಾಡುವುದು ಹೇಗೆ ಎಂಬುದಕ್ಕೆ ಎಚ್‌ಎಸ್‌ಆರ್ ಲೇಔಟ್ ನ ಈ ಕೇಂದ್ರ ಒಂದು ಉತ್ತಮ ಉದಾಹರಣೆಯಾಗಿದೆ. ಎಚ್‌ಎಸ್‌ಆರ್ ಸಿಟಿಜನ್ ಫೋರಂನ ಸದಸ್ಯರು ಎಂಟು ವರ್ಷಗಳ ಹಿಂದೆ ಮಿಶ್ರಗೊಬ್ಬರ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಲು ಶಾಲೆಯನ್ನು ಪ್ರಾರಂಭಿಸಿದರು. ಇದು ಇಂದು ವಿಶ್ಯಾದ್ಯಂತ ಖ್ಯಾತಿ ಪಡೆದಿದೆ.

ಪ್ರಪಂಚದ ವಿವಿಧ ಭಾಗಗಳ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ, ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪ್ರವಾಸದಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿ ಬೆಂಗಳೂರಿನಲ್ಲಿ ಪರಿಸರದ ಪರಿಣಾಮವೇನೆಮ್ಬ ಬಗ್ಗೆ ಮಾಹಿತಿ ಪಡೆದರು.

ಫೋರಂ ಸ್ಥಾಪಕ ಸದಸ್ಯರಲ್ಲೊಬ್ಬರಾದ ಶಾಂತಿ ತುಮಲಾ ಹೇಳುವ ಪ್ರಕಾರ, ಘನತ್ಯಾಜ್ಯ ನಿರ್ವಹಣಾ ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರಿಕಾ ವಿಧಾನ ಅಳವಡಿಸಲು ನಾವು 10 ಜನರ ಗುಂಪು ಕಾರ್ಯನಿರ್ವಹಿಸುತ್ತಿದ್ದು, ಅಪಾರ್ಟ್ ಮೆಂಟ್ ಹಾಗೂ ಹಲವು ಮನೆಗಳ ಬಳಿ ತ್ಯಾಜ್ಯ ಹಾಕಲು ಪ್ರತ್ಯೇಕವಾದ ಸಾಧನಗಳನ್ನು ಅಳವಡಿಸಿದ್ದೇವೆ. ಉದ್ಯಾನವನಗಳ ಬಳಿ ಮರ-ಗಿಡಗಳ ಎಲೆ ಸಂಗ್ರಹಣಕ್ಕಾಗಿ ಕಾಂಪೋಸ್ಟರ್ ಗಳನ್ನು ಅಳವಡಿಸಿದ್ದು, ಪೌರಕಾರ್ಮಿಕರು ಉದ್ಯಾನವನಗಳ ಎಲೆ, ಕಸಕಡ್ಡಿಗಳನ್ನು ಅವುಗಳಿಗೆ ಹಾಕುತ್ತಾರೆ. ಹೀಗೆ ತಂದ ತ್ಯಾಜ್ಯಗಳನ್ನು ನಾವು ಇಲ್ಲಿ ಮಿಶ್ರಗೊಬ್ಬರಗಳನ್ನಾಗಿ ತಯಾರಿಸುತ್ತೇವೆ. ಬಳಿಕ ಅವುಗಳನ್ನು ಹಲವರು ಮನೆಗಳಲ್ಲಿ ಟೆರೇಸ್ ಗಾರ್ಡನ್ ಗಳಿಗೆ ಹಾಗೂ ಉದ್ಯಾನವನಗಳ ಗಿಡಗಳಿಗೆ ಬಳಸಿಕೊಳ್ಳುಲು ಉಪಯೋಗಿಸುತ್ತಾರೆ ಎಂದು ತಿಳಿಸಿದ್ದಾರೆ.

ಫೋರಂ ನ ಮತ್ತೊಬ್ಬ ಸಾಸ್ಯರಾದ ರತ್ನಾಕರ್ ಎಂಬುವವರು ಹೇಳುವ ಪ್ರಕಾರ 2018ರಲ್ಲಿ ಇಲ್ಲಿ ಸ್ವಚ್ಛಭಾರತ ಕಲಿಕಾ ಕೇಂದ್ರ ಉದ್ಘಾಟಿಸಲಾಗಿದ್ದು, ಘನತ್ಯಾಜದ ಮೂಲಕ ಏರೋಬಿಕ್ ಮಿಶ್ರಗೊಬ್ಬರ, ಆಮ್ಲಜನಕರಹಿತ ಮಿಶ್ರಗೊಬ್ಬರ, ವರ್ಮಿ-ಮಿಶ್ರಗೊಬ್ಬರ ಹೀಗೆ ವಿವಿಧ ರೀತಿಯ ಮಿಶ್ರಗೊಬ್ಬರಗಳ ತಯಾರಿಸುವ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಇವುಗಳ ಮಾಹಿತಿಪಡೆಯಲು ಹಾಗೂ ಕಲಿಕೆಗಾಗಿ ದೇಶ-ವಿದೇಶಗಳಿಂದ ಸಾವಿರಾರು ಜನರು, ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಒಟ್ಟಾರೆ ತ್ಯಾಜ್ಯನಿರ್ವಹಣೆ ಹಾಗೂ ಸಾವಯವಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಹೆಚ್ ಎಸ್ ಆರ್ ಲೇಔಟ್ ನ ಸಿಟಿಜನ್ ಫೋರಂ ನಿಜಕ್ಕೂ ಮಾದರಿಯಾಗಿದೆ.

ತ್ಯಾಜ್ಯ ನಿರ್ವಹಣೆ ಮಾರ್ಗವನ್ನು ಹೇಳಿಕೊಡುತ್ತದೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್…

Bengaluru’s HSR Layout shows the way to manage waste