ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ – ರಮೇಶ ಜಾರಕಿಹೊಳಿ ಪುತ್ರ ಅಮರನಾಥ್

ಬೆಂಗಳೂರು,ಅಕ್ಟೋಬರ್,12,2020(www.justkannada.in) : ತಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನು. ರಾಜಕಾರಣದಲ್ಲಿ ಬೆಳೆಯಲು ಇನ್ನೂ ಬಹಳ ಸಮಯವಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಪುತ್ರ ಹಾಗೂ ಕೆ.ಎಂ.ಎಫ್ ನಿರ್ದೇಶಕ ಅಮರನಾಥ್ ಸ್ಪಷ್ಟಪಡಿಸಿದ್ದಾರೆ.jk-logo-justkannada-logoಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಪಕ್ಷದ ಕಾರ್ಯಕರ್ತನಾಗಿ ಇನ್ನೂ ಸಾಕಷ್ಟು ಕೆಲಸ‌ ಮಾಡುವ ಮನಸ್ಸಿದೆ. ನನ್ನ ತಂದೆಯವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಗೋಕಾಕ್ ಕ್ಷೇತ್ರದ ಸಾರ್ವಜನಿಕರ ಕುಂದು‌ ಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವರಾಗಿದ್ದ  ದಿ. ಸುರೇಶ್ ಅಂಗಡಿಯವರು ಸಾಕಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಈ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡುವ ಜವಾಬ್ದಾರಿ ನನ್ನಂತಹ ಪ್ರತಿಯೊಬ್ಬ ಕಾರ್ಯಕರ್ತನ‌ ಮೇಲಿದೆ ಎಂದಿದ್ದಾರೆ.

Belgaum-LokSabha-election-Don't-compete-Amarnath-son-Ramesh Jarakiiholi

ನನ್ನ ಸ್ನೇಹಿತರೂ, ಆಪ್ತರು ಮತ್ತು ಕಾರ್ಯಕರ್ತರ ಮನದಾಳವನ್ನು ಅರಿತಿದ್ದೇನೆ. ಸಾಮಾಜಿಕ‌ ಜಾಲತಾಣಗಳಲ್ಲಿ ನನ್ನ ಬಗ್ಗೆ ಟ್ರೋಲ್ ಆಗುತ್ತಿರುವ ವಿಷಯಗಳನ್ನು ಗಮನಿಸಿದ್ದೇನೆ. ಆದರೆ, ರಾಜಕೀಯವಾಗಿ ಬೆಳೆಯಲು ನನಗೆ ಬೇಕಾದಷ್ಟು ಸಮಯವಿದೆ ಎಂದು ಹೇಳಿದ್ದಾರೆ.

ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಗುವ ಮನಸ್ಸು ನನಗಿಲ್ಲ. ನಾನು ಎಲ್ಲಾ‌ ಕಾರ್ಯಕರ್ತರಂತೆ ಟೊಂಕ ಕಟ್ಟಿ‌ ನಿಂತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಅಮರನಾಥ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

key words : Belgaum-LokSabha-election-Don’t-compete-Amarnath-son-Ramesh Jarakiiholi