ವಿಕೋಪಕ್ಕೆ ತಿರುಗಿದ ಸಹೋದರರ ತಿಕ್ಕಾಟ: ಪೊಲೀಸರಿಗೆ ಕಾನೂನು ಕೈಗೆತ್ತಿಕೊಳ್ಳುವ ಎಚ್ಚರಿಕೆ ಕೊಟ್ಟ ಮಾಜಿ ಸಚಿವ ಸತೀಶ್ ಜಾರಕಿಹೊಳಿ….

Promotion

ಬೆಳಗಾವಿ,ಸೆ,28,2019(www.justkannada.in):  ಬೆಳಗಾವಿ ರಾಜಕೀಯದಲ್ಲಿ ಸಹೋದರ ತಿಕ್ಕಾಟ ವಿಕೋಪಕ್ಕೆ ತಿರುಗಿದ್ದು, ರಮೇಶ್ ಜಾರಕಿಹೊಳಿ ಆಪ್ತನಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಆತನ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಕಾನೂನು ಕೈಗೆತ್ತಿಕೊಳ್ಳುವುದಾಗಿ  ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಅನರ್ಹ ಶಾಸಕ ರಮೇಶ ಜಾರಕಿಹೊಳಿ ಆಪ್ತ ರಾಜು ತಳವಾರ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆ ಸಂಬಂಧ ಪ್ರಕರಣ ದಾಖಲು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ  ಅಂಕಲಗಿ ಪೊಲೀಸ್ ಠಾಣೆಗೆ  ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಭೇಟಿ ನೀಡಿದ್ದರು.

ರಾಜು ತಳವಾರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾನೇ ಮುಂದೆ ನಿಂತು ಹೊಡೆಯುತ್ತೇನೆ. ನಿಮ್ಮ ಶಾಸಕ, ಅಂಬಿರಾವ್ ಪಾಟೀಲ್ ಬಂದ್ರು ಡೋಂಟ್ ಕೇರ್. ಆ ತಾಕತ್ತು ನಮಗು ಇದೆ. ಇಷ್ಟು ಕೈ ಹಾಕಬಾರದು ಅಂತ ಬಿಟ್ಟಿದಿನಿ. ನಮ್ಮ ಜನಕ್ಕೆ ನ್ಯಾಯ ಸಿಗಬೇಕು. ರಾಜು ತಳವಾರ್ ಮೇಲೆ ಕ್ರಮ ಕೈಗೊಳ್ಳದಿದ್ದರೇ  ಕಾನೂನು ಕೈಗೆ ಎತ್ತಿಕೊಳ್ಳಲಾಗುತ್ತೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಡಿ ವೈ ಎಸ್ ಪಿ ಪ್ರಭುಗೆ ನೇರ ಎಚ್ಚರಿಕೆ ನೀಡಿದರು.

ರಾಜಾ, ಅಂಬಿಗೆ ಕಂಟ್ರೋಲ್ ಮಾಡಿ. ಇಲ್ಲವಾದಲ್ಲಿ ನಾನು ಎಲ್ಲದಾಕ್ಕೂ ಸಿದ್ದನಿದ್ದೇನೆ ಎಂದು ಪೊಲೀಸರಿಗೆ ಸತೀಶ್ ಜಾರಕಿಹೊಳಿ ತಿಳಿಸಿದರು.

Key words: belagavi-sathish jarkiholi-ramesh jarkiholi- assult- Warning