ಮೈಸೂರಿನಲ್ಲಿ ಬೆಡ್ ಕೊರತೆ ವಿಚಾರ : ಸುತ್ತೂರು ಮಠದ ಸಹಕಾರ ಕೇಳಿದ ಸಚಿವ ಎಸ್.ಟಿ ಸೋಮಶೇಖರ್

Promotion

ಮೈಸೂರು,ಮೇ,10,2021(www.justkannada.in): ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು ಸೋಂಕಿತರಿಗೆ ಬೆಡ್ ಕೊರತೆ ಉಂಟಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸುತ್ತೂರು ಮಠದ ಸಹಕಾರ ಕೇಳಿದ್ದಾರೆ.jk

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ  ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ‌ ನೇತೃತ್ವದಲ್ಲಿ ಸಭೆ  ನಡೆಯಿತು. ಮೈಸೂರಿನಲ್ಲಿ ಸೋಂಕಿತರಿಗೆ ಬೆಡ್ ಸಮಸ್ಯೆ ಸೇರಿ ಹಲವು ವಿಚಾರಗಳನ್ನ ಚರ್ಚಿಸಲಾಯಿತು. ಈ ವೇಳೆ ಕೊರೋನಾ ತಡೆಗಾಗಿ ಸಭೆಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಸುತ್ತೂರು ಮಠದ ಸಹಕಾರ ಕೋರಿದರು.bed-shortage-mysore-minister-st-somashekhar-asked-cooperation-sutftur-math

ಸಂಸದ ಪ್ರತಾಪ್‌ಸಿಂಹ, ಶಾಸಕ ನಾಗೇಂದ್ರ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸೇರಿ ಹಲವು ಅಧಿಕಾರಿಗಳು  ಸಭೆಯಲ್ಲಿ ಭಾಗಿಯಾಗಿದ್ದರು.

Key words: Bed shortage – Mysore-  Minister -ST Somashekhar -asked – Cooperation –sutftur math.