ನಕಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ವಂಚನೆ ಆರೋಪ: ಮಾಜಿ ಕಾರ್ಪೋರೇಟರ್ ಪತಿ ವಿರುದ್ದ ದೂರು ದಾಖಲು…

Promotion

ಬೆಂಗಳೂರು,ಮಾ,12,2020(www.justkannada.in):  ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ  ನಕಲಿ ದಾಖಲೆ ಸೃಷ್ಠಿಸಿ ಭೂಪರಿಹಾರ ಮತ್ತು ನಿವೇಶನಗಳನ್ನ ಪಡೆದಿದ್ದ ಆರೋಪದ ಮೇಲೆ ಮಾಜಿ ಕಾರ್ಪೋರೇಟರ್ ಪತಿ ವಿರುದ್ದ ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಕಾರ್ಪೋರೇಟರ್ ಪತಿ ಹೆಚ್. ನಾಗರಾಜಯ್ಯ ವಿರುದ್ದವೇ ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಿದ ಆರೋಪದ ಮೇಲೆ ಬಿಡಿಎ ದೂರು ದಾಖಲಿಸಿದೆ.  ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಹೆಮ್ಮಿಗೆಪುರ ಗ್ರಾಮದ ಸರ್ವೇ ನಂ 109ರಲ್ಲಿನ 5 ಎಕರೆ 3 ಗುಂಟೆ ಜಮೀನಿಗೆ ನಾಗರಾಜಯ್ಯ ಅವರು  ಜೀವಂತವಾಗಿರುವ ಭೂಮಾಲೀಕರು ಮೃತಪಟ್ಟಿರುವುದಾಗಿ ನಕಲಿ ದಾಖಲೆಗಳನ್ನ ಸೃಷ್ಠಿಸಿ ಬಿಡಿಎ ಇಂದ 37 ಲಕ್ಷ ಭೂ ಪರಿಹಾರ ಧನ ಮತ್ತು  ಸುಮಾರು 7.5 ಕೋಟಿ ಬೆಲೆ ಬಾಳುವ ನಿವೇಶನವನ್ನ ಪಡೆದಿದ್ದರು.

ಈ ವಿಚಾರ ತಿಳಿದ ಬಿಡಿಎ ಜಾಗೃತ ದಳದ ಪೊಲೀಸರು ಅಕ್ರಮವಾಗಿ ಪಡೆದಿದ್ದ ಭೂಪರಿಹಾರ ಧನ ಮತ್ತು ನಿವೇಶನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕಾರ್ಪೋರೇಟರ್ ಪತಿ ಹೆಚ್. ನಾಗರಾಜಯ್ಯ ವಿರುದ್ದ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಬಿಡಿಎ ದೂರು ದಾಖಲಿಸಿದೆ.

Key words: BDA – fraud –creating- fake-record-Complaint -against -former corporator- husband