ವೇದಾಗೆ ಬಿಸಿಸಿಐ ಸಾಂತ್ವನ, ಧನ್ಯವಾದ ಹೇಳಿದ ಕನ್ನಡತಿ

Promotion

ಬೆಂಗಳೂರು, ಮೇ 19, 2021 (www.justkannada.in): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಕರ್ನಾಟಕದ ವೇದಾ ಕೃಷ್ಣಮೂರ್ತಿಗೆ ಕೊನೆಗೂ ಬಿಸಿಸಿಐನಿಂದ ಸಾಂತ್ವನ ಹೇಳಿದೆ.

ಸಂಕಷ್ಟದ ಸಮಯದಲ್ಲಿ ಆತ್ಮವಿಸ್ವಾಸ ತುಂಬಿದ ಬಿಸಿಸಿಐ ಮತ್ತು ಕಾರ್ಯದರ್ಶಿ ಜಯ್‌ ಶಾ ಅವರಿಗೆ ವೇದಾ ಕೃಷ್ಣಮೂರ್ತಿ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಆಸ್ಟ್ರೇಲಿಯದ ಆಟಗಾರ್ತಿ ಲೀಸಾ ಸ್ಥಾಲೇಕರ್‌ ಬಿಸಿಸಿಐ ವಿರುದ್ಧ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಸ್ತಲೇಕರ್, ವೇದಾಗೆ ಬಿಸಿಸಿಐ ಕನಿಷ್ಠ ಅನುಕಂಪವನ್ನೂ ಸೂಚಿಸುವ ಪ್ರಯತ್ನ ಮಾಡಿಲ್ಲ ಎಂದು ಟೀಕಿಸಿದ್ದರು.