ಡಿಕೆಶಿ ಸಿಎಂ ಮಾಡಿದ್ರೆ ವಾಪಸ್ ಬರ್ತೀವಿ ಎಂದಿದ್ರು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಬಿ.ಸಿ ಪಾಟೀಲ್ ತಿರುಗೇಟು..

Promotion

ಬೆಂಗಳೂರು,ನವೆಂಬರ್,16,2023(www.justkannada.in): ಸಮ್ಮಿಶ್ರ ಸರ್ಕಾರದ ಪತನದ ವೇಳೆ ಡಿಕೆ ಶಿವಕುಮಾರ್ ಸಿಎಂ ಮಾಡಿದ್ರೆ ವಾಪಸ್ ಬರ್ತೀವಿ ಎಂದು ಮುಂಬೈಗೆ ಹೋಗಿದ್ದ ಶಾಸಕರು ಹೇಳಿದ್ದರು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಸಿ ಪಾಟೀಲ್,  ಡಿಕೆಶಿ  ಸಿಎಂ ಮಾಡಿದರೇ  ವಾಪಸ್ ಬರುತ್ತೇವೆ ಎಂಬುದು ಸುಳ್ಳು. ಡಿಕೆ ಶಿವಕುಮಾರ್ ರಾತ್ರಿ ಬಿದ್ದ ಕನಸನ್ನ ಬೆಳಿಗ್ಗೆ ಹೇಳ್ತಾರೆ. ಡಿಕೆ ಶಿವಕುಮಾರ್  ಹೆಚ್.ಡಿ ಕುಮಾರಸ್ವಾಮಿ ಮೇಲೆ ಬೇಸರದಿಂದಲೇ ಮುಂಬೈಗೆ ಹೋಗಿದ್ದವು. ಮುಂಬೈಗೆ ಹೋಗಿದ್ದೇ ಮೈತ್ರಿ ಸರ್ಕಾರ ಬೀಳಿಸಲು ಎಂದರು.

ಡಿಕೆಶಿ ಸಿಎಂ ಮಾಡಿ ಎಂದು ಎಸ್ ಟಿ ಸೋಮಶೇಖರ್, ಗೋಪಾಲಯ್ಯ ಹೇಳಿದ್ದರು ಎಂಬುದು ಕಟ್ಟುಕಥೆ.  ವಿಷಯ ಡೈವರ್ಟ್ ಮಾಡಲು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಬಿಸಿ ಪಾಟೀಲ್ ಟಾಂಗ್ ನೀಡಿದರು.

Key words: BC Patil – DK Shivakumar- statement – returned – become CM.