ಬೆಂಗಳೂರು ಜನತೆಯ ತೀರ್ಪಿನ ವಿರುದ್ದ ಮತ್ತೆ ಬಿಬಿಎಂಪಿ ಅಧಿಕಾರ ಹಿಡಿಯಲು ಹುನ್ನಾರ- ‘ಕೈ’ ‘ತೆನೆ’ ವಿರುದ್ದ ಪದ್ಮನಾಭ ರೆಡ್ಡಿ ಆಕ್ರೋಶ…

ಬೆಂಗಳೂರು,ಜು,1,2019(www.justkannada.in): ಹೊರ ಜಿಲ್ಲೆಯ ವಿಧಾನಪರಿಷತ್ ಸದಸ್ಯರನ್ನು ಬೆಂಗಳೂರು ಮತದಾರರ ಪಟ್ಟಿ ಸೇರ್ಪಡೆ ಮಾಡಿ  ಮತ್ತೆ ಬಿಬಿಎಂಪಿ ಅಧಿಕಾರ ಹಿಡಿಯಲು  ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹುನ್ನಾರ ನಡೆಸುತ್ತಿವೆ ಎಂದು ಬಿ.ಬಿ.ಎಂ.ಪಿ.ವಿರೋಧ ಪಕ್ಷದ ನಾಯಕರಾದ ಪದ್ಮನಾಭ ರೆಡ್ಡಿ  ಕಿಡಿಕಾರಿದರು.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪದ್ಮನಾಭರೆಡ್ಡಿ,  ಬಿ.ಬಿ.ಎಂ.ಪಿ.ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಮತದಾರರ ತೀರ್ಪಿಗೆ ವಿರುದ್ದವಾಗಿ ಅಕ್ರಮವಾಗಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್.ಪಕ್ಷವು ಅಧಿಕಾರಿ ಹಿಡಿದಿದೆ .ಐದನೇಯ ವರ್ಷವು ಮೇಯರ್ ಆಯ್ಕೆಯಲ್ಲಿ ಸಹ ಹೊರ ಜಿಲ್ಲೆಯ ವಿಧಾನಪರಿಷತ್ತು ಸದಸ್ಯರನ್ನು ಬೆಂಗಳೂರು ಮತದಾರರ ಪಟ್ಟಿ ಸೇರ್ಪಡೆ ಮಾಡಲು ಹುನ್ನಾರ ಮಾಡುತ್ತಿದ್ದರು .ಕಳೆದ ಬಾರಿ ಚುನಾವಣೆ ಆಯೋಗಕ್ಕೆ ದೂರು ನೀಡಿದ ಮೇಲೆ ಹಲವಾರು ವಿಧಾನಪರಿಷತ್ತು ಸದಸ್ಯರು ತಮ್ಮ ಸ್ವಂತ ಜಿಲ್ಲೆಗೆ ಮತದಾರರ ಪಟ್ಟಿ ಸೇರ್ಪಡೆಗೊಳಿಸಿದ್ದಾರೆ ಎಂದು ತಿಳಿಸಿದರು.

2019ರ ಸಾಲಿನಲ್ಲಿ ಮತ್ತೆ ಅಧಿಕಾರ ಚುಕ್ಕಣಿ ಹಿಡಿಯಲು 4 ವಿಧಾನಪರಿಷತ್ತು ಸದಸ್ಯರನ್ನು ಬೆಂಗಳೂರು ನಗರ ಮತದಾರರ ಪಟ್ಟಿಗೆ ಸೇರುತ್ತಿದ್ದಾರೆ .ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೆ ಸಾಮಾಜಿಕ ನ್ಯಾಯವೆಂದರೆ ಇದೆನಾ…? ಕಾನೂನು ಅರಿವು ಇರುವವರು ಈ ರೀತಿ ತಪ್ಪು ಮಾಡುವುದು ಸರಿಯೆ ಎಂದು ಪ್ರಶ್ನೆ ಮಾಡಿದರು.

ಇದೆ ರೀತಿಯಲ್ಲಿ ಮುಂದುವರೆದರೆ ಉಗ್ರ ಹೋರಟ ಮಾಡಲಾಗುವುದು ಮತ್ತು ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು  ಪದ್ಮನಾಭ ರೆಡ್ಡಿ ಎಚ್ಚರಿಕೆ ನೀಡಿದರು.

Key words: BBMP – Padmanabha Reddy – outrage- against –Congress- JDS