ಅದ್ಧೂರಿ ‘ಕರಗ ಉತ್ಸವ’ಕ್ಕೆ ಬ್ರೇಕ್ ಹಾಕಿದ ಬಿಬಿಎಂಪಿ…

Promotion

ಬೆಂಗಳೂರು,ಏಪ್ರಿಲ್,15,2021(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಐತಿಹಾಸಿಕ ಕರಗ  ಉತ್ಸವಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಈ ಕುರಿತು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮಾಹಿತಿ ನೀಡಿದ್ದು, ಈ ಬಾರಿಯ ಐತಿಹಾಸಿಕ ಕರಗ ಅತ್ಯಂತ ಸರಳವಾಗಿರಲಿದೆ ಎಂದು ತಿಳಿಸಿದ್ದಾರೆ.  ದೇವಸ್ಥಾನಕ್ಕೆ ಮಾತ್ರ ವಿಶ್ವವಿಖ್ಯಾತ ಬೆಂಗಳೂರು ಕರಗ ಸೀಮಿತವಾಗಿರಲಿದೆ. ಉತ್ಸವ ಸಮಿತಿಯನ್ನ ರಚನೆ ಮಾಡಲಾಗಿದೆ. ಉತ್ಸವ ಸಮಿತಿಯ ಶಿಫಾರಸುಗಳನ್ನು ಸಭೆ ಮುಂದೆ ಮಂಡಿಸಲಾಯ್ತು. ಈಗಿನ ಸಂದರ್ಭದಲ್ಲಿ ದೇವಾಲಯದ ಸಮೀಪ ಎಷ್ಟೋ‌ ಕೇಸ್ ಗಳು ಬರುತ್ತಿವೆ. ಈ‌ ಬಾರಿ ಬಹಳ ಸೀಮಿತವಾಗಿ ಆಚರಣೆಗೆ ಮಾಡಬೇಕು. ಸಲಹೆ ಬಂದಿವೆ ಅದನ್ನೂ ಪುನರ್ ಪರಿಶೀಲನೆ ನಡೆಸಲು ಡಿಸಿಗೆ ಹೇಳಿದ್ದೇನೆ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ತಿಳಿಸಿದ್ದಾರೆ. BBMP - break – karaga utsava –gowrav gupta

ಹಾಗೆಯೇ ಉತ್ಸವ ಸಮಿತಿ ಜತೆ ಏಪ್ರಿಲ್ 17 ಮತ್ತೊಂದು ಸಭೆ ನಡೆಯಲಿದೆ. ಜಿಲ್ಲಾಧಿಕಾರಿ ಒಂದು ವರದಿ ಕೊಟ್ಟಿದ್ದಾರೆ ಎಲ್ಲರೂ ಸೇರಿ ಒಂದು ಅಭಿಪ್ರಾಯಕ್ಕೆ ಬರಬೇಕು.  ದೇವಾಲಯದ ಒಳಗೆ ಆಚರಣೆಗೆ ಸಲಹೆ ಕೊಟ್ಟಿದ್ದು, ಕೋವಿಡ್ ಏರಿಕೆ ಹಿನ್ನೆಲೆ ಈ‌ ಬಾರಿಯ ಮೆರವಣಿಗೆಗೆ ಅವಕಾಶ ಇರುವುದಿಲ್ಲ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.

Key words: BBMP – break – karaga utsava –gowrav gupta