ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ: ನಾಳೆ ಬಿಜೆಪಿ ಸೇರ್ಪಡೆ.

SSLC examination -should not be- cancel-Basavaraja horatti
Promotion

ಬೆಂಗಳೂರು, ಮೆ ,16,2022(www.justkannada.in):  ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದು ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ವಿಧಾನ ಪರಿಷತ್ತು ಕಾರ್ಯದರ್ಶಿ ಅವರನ್ನು ಸೋಮವಾರ ಮಧ್ಯಾಹ್ನ ಭೇಟಿ ಮಾಡಿದ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಅಲ್ಲದೆ ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ನಿಯಮಗಳ ಪ್ರಕಾರ ಸಭಾಪತಿ ಉಪಸಭಾಪತಿಗೆ ರಾಜೀನಾಮೆ ಸಲ್ಲಿಸಬೇಕು. ಆದರೆ, ಸದ್ಯ ಉಪಸಭಾಪತಿ ಸ್ಥಾನ ಖಾಲಿ ಇದ್ದು ಈ ಹಿನ್ನೆಲೆಯಲ್ಲಿ  ಬಸವರಾಜ ಹೊರಟ್ಟಿ ಅವರು  ಉಪಸಭಾಪತಿ ಉಲ್ಲೇಖಿಸಿ ವಿಧಾನ ಪರಿಷತ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ.SSLC examination -should not be- cancel-Basavaraja horatti

ಈ ಕುರಿತು ಮಾತನಾಡಿರುವ ಬಸವರಾಜ ಹೊರಟ್ಟಿ, “ಸಭಾಪತಿ ಮತ್ತು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾಳೆ ಬಿಜೆಪಿ ಸೇರ್ಪಡೆಯಾಗುತ್ತೇನೆ. ಮೋಹನ್ ಲಿಂಬಕಾಯಿ ವಿರೋಧದ ಬಗ್ಗೆ ಮಾತನಾಡಲ್ಲ. ನನ್ನ ಕುಟುಂಬಸ್ಥರು ಯಾರೂ ರಾಜಕೀಯಕ್ಕೆ ಬರಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರೂ ರಾಜಕೀಯಕ್ಕೆ ಬರಲ್ಲ. ನನ್ನ ಕುಟುಂಬದಿಂದ ನಾನೊಬ್ಬನೇ ಚುನಾವಣೆಗೆ ನಿಲ್ಲುತ್ತೇನೆ ಎಂದರು.

Key words: Basavaraja horatti- resigns – join -BJP – tomorrow.