ಬಂಜಾರ ಸಮುದಾಯ ಪ್ರಥಮ ಜಗದ್ಗುರು ಶ್ರೀ ರಾಮರಾವ್ ಮಹಾರಾಜ್ ನಿಧನಕ್ಕೆ ಗಣ್ಯರ ಸಂತಾಪ

Promotion

ಬೆಂಗಳೂರು,ಅಕ್ಟೋಬರ್,31,2020(www.justkannada.in)  : ಬಂಜಾರ ಸಮುದಾಯದ ಪ್ರಥಮ ಜಗದ್ಗುರು ಶ್ರೀ ರಾಮರಾವ್ ಮಹಾರಾಜ್ ಅವರ ನಿಧನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.jk-logo-justkannada-logo

ಬಾಲ ತಪಸ್ವಿ ಶ್ರೀ ರಾಮರಾವ್ ಮಹಾರಾಜ್

ಬಿ.ಎಸ್.ಯಡಿಯೂರಪ್ಪ ಅವರು ವಿಶ್ವ ಬಂಜಾರ ಸಮುದಾಯದ ಪ್ರಥಮ ಜಗದ್ಗುರು, ಬಾಲ ತಪಸ್ವಿ ಶ್ರೀ ರಾಮರಾವ್ ಮಹಾರಾಜ್ ದೈವಾಧೀನರಾದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ದೇವರು ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಸಮಸ್ತ ಭಕ್ತರಿಗೆ ಮತ್ತು ಬಂಜಾರ ಬಂಧುಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಎಲ್ಲ ತಳಸಮುದಾಯಗಳೂ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ

ಸಿದ್ದರಾಮಯ್ಯ ಅವರು, ಜಗದ್ಗುರು ಶ್ರೀ ರಾಮರಾವ್ ಮಹಾರಾಜ್ ಲಿಂಗೈಕ್ಯರಾದ ಸುದ್ದಿಯಿಂದ ದು:ಖಿತನಾಗಿದ್ದೇನೆ. ಗುರುಗಳ ಅಗಲಿಕೆಯಿಂದ ಬಂಜಾರ ಸಮುದಾಯ ಮಾತ್ರವಲ್ಲ ಎಲ್ಲ ತಳಸಮುದಾಯಗಳೂ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ‌ ಸದ್ಗತಿಯನ್ನು ಕೋರುತ್ತೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Banjara,Community,First,Jagadguru,Shri Ramarao Maharaj,condolences,elite,death

key words : Banjara-Community-First-Jagadguru-Shri Ramarao Maharaj-condolences-elite-death