ವೀಕೆಂಡ್ ಮೋಜಿಗೆ ಪಬ್ ಗೆ ತೆರಳಿದ್ದ ಯುವಜೋಡಿ: ಕಟ್ಟಡದಿಂದ ಕೆಳಗೆಬಿದ್ದು ಸಾವು

Promotion

ಬೆಂಗಳೂರು:ಜೂ-22:(www.justkannada.in) ವೀಕೆಂಡ್ ಮೋಜಿಗಾಗಿ ಕಂಠಪೂರ್ತಿ ಕುಡಿದ ದಂಪತಿಗಳಿಬ್ಬರು ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚರ್ಚ್​ ಸ್ಟ್ರೀಟ್​ನ ಆ್ಯಶ್​ ಬಿಯರ್​ ಪಬ್​ಗೆ ವಾರಾಂತ್ಯದ ಮೋಜಿಗೆಂದು ತೆರಳಿದ್ದ ಪವನ್ ಅತ್ತಾವರ್, ವೇದಾ, ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಇವರು ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪಬ್​ನ ಕೊನೆಯ ಅಂತಸ್ತಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ, ಆಯತಪ್ಪಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಇದೇ ವೇಳೆ ನೂತನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಚರ್ಚ್ ಸ್ಟ್ರೀಟ್ ರೋಡಲ್ಲಿ ನೈಟ್ ರೌಂಡ್ಸ್ ನಲ್ಲಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರ ಪರಸ್ಥಿತಿ ಗಂಭೀರವಗೈತ್ತು. ಇಬ್ಬರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಅದಾಗಲೇ ಮೃತಪಟ್ಟಿದ್ದರು. ಜೋಡಿ ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 

ವೀಕೆಂಡ್ ಮೋಜಿಗೆ ಪಬ್ ಗೆ ತೆರಳಿದ್ದ ಯುವಜೋಡಿ: ಕಟ್ಟಡದಿಂದ ಕೆಳಗೆಬಿದ್ದು ಸಾವು
bangalore,couple died,fell from third floor