‘ವಿಜಯಕರ್ನಾಟಕ’ ಪತ್ರಿಕೆಗೆ ಹೊಸ ಸಂಪಾದಕರ ನೇಮಕ,

Promotion

ಬೆಂಗಳೂರು, ಮಾ.09, 2022 : (www.justkannada.in news ) ವಿಜಯ ಕರ್ನಾಟಕದ ಬೆಂಗಳೂರು ಬ್ಯೂರೋ ಮುಖ್ಯಸ್ಥ ಸುದರ್ಶನ ಚನ್ನಂಗಿಹಳ್ಳಿ ಈಗ ವಿಜಯ ಕರ್ನಾಟಕ ಪತ್ರಿಕೆಯ ನೂತನ ಸಂಪಾದಕರಾಗಿ ಆಯ್ಕೆಯಾಗಿದ್ದಾರೆ.

ಎಂಎಂಸಿಎಲ್ ಸಿಇಒ ರಂಜಿತ್ ಕಾಟೆ ಅವರು ಬುಧವಾರ ಸಂಜೆ ಪತ್ರಿಕೆಯ ಸೀನಿಯರ್ಸ್ ಸಭೆಯಲ್ಲಿ ಈ ವಿಷಯವನ್ನು ಘೋಷಿಸಿದರು.
ಹಾಸನ ಮೂಲದ ಸುದರ್ಶನ ಚನ್ನಂಗಿಹಳ್ಳಿ ಅವರು ತಮ್ಮವೃತ್ತಿ ಜೀವನ ಆರಂಭಿಸಿದ್ದೇ ವಿಜಯ ಕರ್ನಾಟಕದಲ್ಲಿ. ಬೆಂಗಳೂರು ಮೆಟ್ರೋ ವರದಿಗಾರರಾಗಿ, ಬೆಂಗಳೂರು ಬ್ಯೂರೋ ಮುಖ್ಯಸ್ಥರಾಗಿ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಹರಿಪ್ರಕಾಶ್ ಕೋಣೆಮನೆ ಅವರ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಸುದರ್ಶನ್ ಅವರು ಮೈಸೂರು ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಯೂ ಹೌದು.

ವಿಜಯ ಕರ್ನಾಟಕದ ಹೊಸ ಸಂಪಾದಕರಾಗಲು ಬೇರೆ ಬೇರೆ ಮಾಧ್ಯಮ ಸಂಸ್ಥೆಗಳ ಹಿರಿಯ ಪತ್ರಕರ್ತರು ಯತ್ನಿಸಿದ್ದರು. ಆದರೆ, ಸಂಸ್ಥೆ ಒಳಗಿನವರನ್ನೇ ಸಂಪಾದಕರನ್ನಾಗಿ ಮುಂಬಡ್ತಿ ನೀಡಿದೆ.

key words : bangalore-vijayakarnatapa-new-editor