ವಿಶ್ವೇಶತೀರ್ಥ ಶ್ರೀಗಳ ಬೃಂದಾವನಕ್ಕೆ ಭೇಟಿ: ಬಿಜೆಪಿ ಸಂಸದರ ಕಚೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ….

Promotion

ಬೆಂಗಳೂರು,ಜ,18,2020(www.justkannada.in):  ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಬೆಂಗಳೂರಿನಲ್ಲಿ  ವಿಶ್ವೇಶತೀರ್ಥ ಶ್ರೀಗಳ ಬೃಂದಾವನಕ್ಕೆ ಭೇಟಿ ನೀಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ ಅವರು ನಂತರ, ಇತ್ತೀಚೆಗೆ ನಿಧನರಾದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ಬೃಂದಾವನಕ್ಕೆ ಭೇಟಿ ನೀಡಿದರು.

ನಂತರ ಜಯನಗರ 5ನೇ ಹಂತದಲ್ಲಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದರ ಕಚೇರಿಯನ್ನ ಅಮಿತ್ ಶಾ ಅವರು ಉದ್ಘಾಟಿಸಿದರು. ಈ ವೇಳೆ ಅಮಿತ್ ಶಾಗೆ ಬಿಜೆಪಿ ನಾಯಕರು ಸನ್ಮಾನಿಸಿದರು. ಇದೀಗ ಅಮಿತ್ ಶಾ ಅವರು ಹುಬ್ಬಳ್ಳಿಗೆ ತೆರಳುತ್ತಿದ್ದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುವ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Key words: Bangalore-Union Home Minister- Amit Shah- inaugurated – BJP MP- office