ಶಾಲೆಗೆ ತೆರಳುವಾಗ ಬಾಲಕಿ ಮೇಲೆ ಬಿದ್ದ ಮರದ ಕೊಂಬೆ…

Promotion

ಬೆಂಗಳೂರು,ಮಾ,12,2020(www.justkannada.in):  ತಂದೆಯ ಜತೆ ಬೈಕ್ ನಲ್ಲಿ  ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಮರದ ಕೊಂಬೆ ಬಿದ್ದು ಬಾಲಕಿ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಮಮೂರ್ತಿ ನಗರದ ಕೌದೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತ್ರಿಷಾ ಮರದ ಕೊಂಬೆ ಬಿದ್ದು ಗಾಯಗೊಂಡ ಬಾಲಕಿ. ತ್ರಿಷಾ ತಂದೆಯ ಜತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಒಣ ಮರದ ಕೊಂಬೆ ಆಕೆಯ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ.

ಗಾಯಗೊಂಡ ಬಾಲಕಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆರ್ ಎಫ್ ಓ ತಾರನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words:  Bangalore-tree -fell -girl – school.