ನಾಳೆ ಸಾರಿಗೆ ನೌಕರರಿಂದ ಬೆಂಗಳೂರಿನಲ್ಲಿ ‘ಕಾಲ್ನಡಿಗೆ ಜಾಥ’…

ಬೆಂಗಳೂರು,ಡಿಸೆಂಬರ್,9,2020(www.justkannada.in):  ಕೃಷಿಕಾಯ್ದೆ ವಿರೋಧಿಸಿ ನಿನ್ನೆಯಷ್ಟೆ ವಿವಿಧ ರೈತಪರ ಸಂಘಟನೆಗಳು ಭಾರತ್ ಬಂದ್ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದವು, ಅಲ್ಲದೆ ಇಂದು ರೈತರು ಬೆಂಗಳೂರಿನಲ್ಲಿ ಬಾರುಕೋಲು ಚಳುವಳಿ ನಡೆಸುತ್ತಿದ್ದಾರೆ. ಈ ಮಧ್ಯೆ ನಾಳೆ ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟಲಿದೆ.logo-justkannada-mysore

ಹೌದು, ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆ ಸಾರಿಗೆ ನೌಕರರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ  ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧಕ್ಕೆ ಸಾರಿಗೆ ನೌಕರರು ಕಾಲ್ನಡಿಗೆ ಜಾಥ ಮೂಲಕ ತೆರಳಿ ಪ್ರತಿಭಟನೆ  ನಡೆಸಲಿದ್ದಾರೆ.bangalore-tomorrow-transport-worker-jatha

ಸಾರಿಗೆ ನೌಕರರ ಈ ಹೋರಾಟಕ್ಕೆ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಜಾಥಾದಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ನಿಗಮಗಳಿಂದ  ನೌಕರರು ಪಾಲ್ಗೊಳ್ಳಲಿದ್ದಾರೆ.

English summary…

‘Jatha on foot’ tomorrow by transport department employees in Bengaluru
Bengaluru, Dec.9, 2020 (www.justkannada.in): The government transport department employees have organized a protest march in Bengaluru tomorrow demanding the State Government to fulfill their various demands including regularization of jobs. The protest march will commence from the Krantiveera Sangolli Rayanna Railway Station at 11.00 am and culminate at the Vidhana Soudha.bangalore-tomorrow-transport-worker-jatha
Various pro-Kannada organisations have extended support to the protest and are joining the jatha. Employees of KSRTC, BMTC, North-East, and North-West transport corporation will take part.
Keywords: Protest march/ transport department/ KSRTC

Key words: Bangalore –tomorrow-transport-worker- jatha