ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕಿದ್ರು ಅನ್ನಿಸುತ್ತಿದೆ- ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬೇಸರ

Promotion

ಬೆಂಗಳೂರು, ಆಗಸ್ಟ್, 19, 2020(www.justkannada.in): ನನ್ನ ರಾಜಕೀಯ ಜೀವನ ಮುಗಿಸಲು ಪ್ರಯತ್ನ ನಡೆದಿದ್ದು, ನನ್ನ ಮನೆ ಸುಟ್ಟಿದಕ್ಕೆ ನನಗೆ ನೋವಿಲ್ಲ. ನನ್ನ ಮುಗಿಸಲು ಷಡ್ಯಂತ್ರ ನಡೆಸಿರುವುದು ನೋವು ನೀಡಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಲು ತೋಡಿಕೊಂಡಿದ್ದಾರೆ. jk-logo-justkannada-logo

ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಕಚೇರಿಯಲ್ಲಿ ಹಾಜರಾಗಿ ವಿಚಾರಣೆ ಎದುರಿಸಿದರು. ಈ ಸಮಯದಲ್ಲಿ ಮಾತನಾಡಿರುವ ಅಖಂಡ ಶ್ರೀನಿವಾಸಮೂರ್ತಿ, ನನ್ನವರೆ ನನಗೆ ಮುಳುವಾದರು. ನನ್ನ ವಿರುದ್ಧ ಸಂಚು ರೂಪಿಸಿದರು. ಇದನ್ನು ಸಹಿಸಲು ಆಗುತ್ತಿಲ್ಲ. ನಾವು ಮನೆಯಲ್ಲಿದದಿರೆ ಉಲಿಯುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. bangalore-roit-case-mla-akhanda-srinivsamurthy-ccb-police

ಆರಂಭದಿಂದಲೂ ನನಗೆ ಯಾರ ಮೇಲೂ ಅನುಮಾನವಿರಲಿಲ್ಲ. ಇದೀಗ ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕಿದ್ರು ಅನಿಸುತ್ತಿದೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

key words: bangalore- roit case-MLA-Akhanda srinivsamurthy-CCB -police