ಜನ ನಿಮಗೆ ಅವಕಾಶ ನೀಡಿದ್ದಾರೆ: ಕೆಲಸ ಮಾಡಲಾಗದಿದ್ರೆ ಚುನಾವಣೆಗೆ ಬನ್ನಿ- ಡಿ.ಕೆ ಶಿವಕುಮಾರ್ ಸವಾಲು.

Promotion

ಬೆಂಗಳೂರು,ಸೆಪ್ಟಂಬರ್,6,2022(www.justkannada.in):  ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡು ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಠಿಯಾಗಿದೆ. ಹೀಗಾಗಿ ಕಾಂಗ್ರೆಸ್ ಕಾಲದಲ್ಲಿ ಆದ ಒತ್ತುವರಿಯಿಂದಾಗಿ ಈ ಪರಿಸ್ಥಿತಿ ಎಂದು ಹೇಳಿಕೆ ನೀಡಿದ್ಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್,  ನಮ್ಮ ಕಾಲದಲ್ಲಿ ಒತ್ತುವರಿ ಆಗಿದ್ರೆ  ತೆರವು ಮಾಡಲಿ. ಕಾಂಗ್ರೆಸ್ ಕಾಲದಲ್ಲಿ ಏನು ಹಾಳಾಯ್ತು ಹೇಳಲಿ. ಬಿಜೆಪಿಗೆ  ಕೆಲಸ ಮಾಡಲಾಗದೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ .  ಕೊಟ್ಟ ಕುದುರೆ ಏರದವನು ಶೂರನ ಅಲ್ಲ ಧೀರನೂ ಅಲ್ಲ. ಜನ ನಿಮಗೆ ಅವಕಾಶ ನೀಡದ್ದಾರೆ. ಕೆಲಸ ಮಾಡಿ. ಕೆಲಸ ಮಾಡಲಾಗದಿದ್ದರೇ ಬನ್ನಿ ಚುನಾವಣೆಗೆ ಹೋಗೋಣಾ ಎಂದು ಸವಾಲು ಹಾಕಿದರು.

ನನ್ನ ಒಬ್ಬನ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಬಿಜೆಪಿ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಬಿಜೆಪಿಯ ಯಾರೂ ಆದಾಯ ಮೀರಿ ಆಸ್ತಿ ಮಾಡಿಲ್ವಾ..?  ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

Key words: Bangalore-rain-CM Bommai-DK Shivakumar- challenge.