ಇನ್​ಸ್ಟಾಗ್ರಾಂನಲ್ಲಿ ಪರಿಚಿತಳಾದ ಅಪ್ರಾಪ್ತೆ ಅತ್ಯಾಚಾರವೆಸಗಿದ ಐವರನ್ನು ಬಂಧಿಸಿದ ಬೆಂಗಳೂರು ಪೊಲೀಸರು.

Promotion

 

ಬೆಂಗಳೂರು, ಜ.23, 2021: (www.justkannada.in news) : ಸಾಮಾಜಿಕ ಜಾಲತಾಣದಲ್ಲಿ ಪರಿಚಿತವಾದ ಅಪ್ರಾಪ್ತೆಯನ್ನು ಪುಸಲಾಯಿಸಿ ಆಕೆ ಮೇಲೆ ಅತ್ಯಾಚಾರವೆಸಗಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

jk

ವೆಂಕಿ, ಲೇಖನ್, ಚೇತನ್ ಮತ್ತು ರಕ್ಷತ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಬಾಬು ಎಂಬಾತನ ಬಂಧನಕ್ಕೆ ಹುನುಮಂತನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.

Bangalore-police-crime-rape-arrested-Instagram

ಕೆಲ ಸಮಯದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಪ್ರಾಪ್ತೆಯ ಪರಿಚಯವಾಗಿತ್ತು. ಈ ಸ್ನೇಹವನ್ನೇ ದುರುಪಯೋಗ ಪಡಿಸಿಕೊಂಡ ಕಿರಾತಕರು, ಜನವರಿ 17 ರಂದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದರು. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಘಟನೆಗೆ ಕಾರಣವಾದ ಐದು ಮಂದಿ ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊರ್ವ ಆರೋಪಿ ಬಾಬುವಿಗಾಗಿ ಶೋಧ ಮುಂದುವರೆದಿದೆ.

oooo

key words : Bangalore-police-crime-rape-arrested-Instagram