ಬಾರಿ ಮಳೆಯಿಂದಾಗಿ ರಾಜಕಾಲುವೆ ಒಡೆದು ಮನೆಗಳಿಗೆ ನುಗ್ಗಿದ ನೀರು…

Promotion

ಬೆಂಗಳೂರು,ಸೆಪ್ಟಂಬರ್,10,2020(www.justkannada.in): ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಾಯಂಡಹಳ್ಳಿಯ ಪ್ರಮೋದ್ ಲೇಔಟ್ ನಲ್ಲಿ ರಾಜಕಾಲುವೆ ಒಡೆದು ಅಲ್ಲಿಯ ಮನೆಗಳಿಗೆ  ನೀರು ನುಗ್ಗಿರುವ ಘಟನೆ ನಡೆದಿದೆ.jk-logo-justkannada-logo

ಮಳೆ ರಾಜಕಾಲುವೆ ಒಡೆದ ಪರಿಣಾಮ ನಾಯಂಡಹಳ್ಳಿಯ ಪ್ರಮೋದ್ ಲೇಔಟಿನಲ್ಲಿ ಮನೆಗಳಿಗೆ 8 ಅಡಿ ನೀರು ನುಗ್ಗಿದ್ದು, ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿಯುಂಟಾಗಿದೆ. ಇನ್ನು ರಾತ್ರಿ ಸಮಯದಲ್ಲಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಲು  ಜನರು  ಹೊರಗಡೆ ಬಂದಿದ್ದಾರೆ.bangalore-nayandalli-rajakaluve-water-houses

ಕಾರು ಸ್ಕೂಟರ್ ಗಳು ಸಹ ಮಳೆ ನೀರಿಗೆ ಸಿಲುಕಿದ್ದು, ರಾತ್ರಿಯೇ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇಷ್ಟೆಲ್ಲಾ ಘಟನೆಗಳಾದರೂ ಸಹ ಇದುವರೆಗೂ ಯಾವುದೇ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಸಂಬಂಧಪಟ್ಟ ಕೆಇಬಿ ಅಧಿಕಾರಿಗಳು ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Bangalore- nayandalli-rajakaluve- Water – houses