ಬೆಂಗಳೂರು ಲಾಕ್ ಡೌನ್: ಅನಗತ್ಯವಾಗಿ ಓಡಾಡಿದ್ರೆ ವಾಹನ ಸೀಜ್  -ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ವಾರ್ನಿಂಗ್

Promotion

ಬೆಂಗಳೂರು,ಜು,14,2020(www.justkannada.in): ಕೊರೋನಾ ಹೆಚ್ಚಳ ಹಿನ್ನೆಲೆ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ  ನಿರ್ಧರಿಸಲಾಗಿದ್ದು, ಅದ್ದರಿಂದ ಲಾಕ್ ಡೌನ್ ವೇಳೆ ಅನಗತ್ಯವಾಗಿ ಓಡಾಡಿದರೇ ವಾಹನ ಸೀಜ್ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಲಾಕ್ ಡೌನ್ ಗೆ ಕೆಲ ಜಿಲ್ಲೆಗಳು ಅನುಮತಿ ಕೇಳಿದ್ದವು. ಹೀಗಾಗಿ ಲಾಕ್ ಡೌನ್ ನಿರ್ಧಾರ ಆಯಾ ಡಿಸಿಗಳಿಗೆ ಬಿಡಲಾಗಿದೆ. ಕೊರೋನಾ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳು ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಈ ವೇಳೆ ಯಾರಾದರೂ ಅನಗತ್ಯವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾರ್ನಿಂಗ್ ನೀಡಿದರು.bangalore-lockdown-vehicle-siege-home-minister-basavaraja-bommai-warning

ಇನ್ನು ಸೀಲ್ ಡೌನ್ ಪ್ರದೇಶ ಸಂಪೂರ್ಣ ಬಂದ್ ಆಗಿರುತ್ತದೆ. ಮಧ್ಯಾಹ್ನ 12 ಗಂಟೆವರೆಗೆ ದಿನಸಿ ಖರೀದಿಗೆ ಅವಕಾಶ ನೀಡಲಾಗುತ್ತದೆ. ಅನಗತ್ಯವಾಗಿ ಓಡಾಡಿದರೇ ವಾಹನ ಸೀಜ್ ಮಾಡಲಾಗುತ್ತದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: Bangalore –Lockdown-Vehicle- Siege-Home Minister- Basavaraja Bommai -Warning