ಬೆಂಗಳೂರು ಉಸ್ತುವಾರಿ ವಿಚಾರ: ಸಚಿವ ಆರ್.ಅಶೋಕ್ ಪರ ವಿ.ಸೋಮಣ್ಣ ಬ್ಯಾಟಿಂಗ್.

Promotion

ಬೆಂಗಳೂರು,ಆಗಸ್ಟ್,23,2022(www.justkannada.in):  ಬಿಬಿಎಂಪಿ ಚುನಾವಣೆ ಹಿನ್ನೆಲೆ  ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಚರ್ಚೆ  ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ ಪರ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದ್ದಾರೆ.

ಇಂದು ಬಿಬಿಎಂಪಿ ಚುನಾವಣಾ ಸಿದ್ಧತೆ ಕುರಿತು ಮಲ್ಲೇಶ್ವರಂ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಸಂಬಂಧವು ಚರ್ಚೆಯಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಮಾತನಾಡಿರುವ ಸಚಿವ ವಿ.ಸೋಮಣ್ಣ. ‘ಸಚಿವ ಆರ್.ಅಶೋಕ್ಗೆ ಬೆಂಗಳೂರು ಉಸ್ತುವಾರಿ ಕೊಡಿ. ಯಾರಾದರೂ ಒಬ್ಬರು ನಮ್ಮಲ್ಲಿ ಜವಾಬ್ದಾರಿ ತೆಗೆದುಕೊಳ್ಳಲಿ. ಅಶೋಕ್ ಇದ್ದಾರೆ, ಅವರಿಗೇ ಜವಾಬ್ದಾರಿ ಕೊಡಿ ಎಂದು ಹೇಳಿದ್ದಾರೆ.

ಚುನಾವಣೆ ಬಂದಾಗ ನಾನು ಬೆಂಗಳೂರಿನಿಂದ ಹೊರಗೆ ಸ್ಪರ್ಧಿಸಲು ಸಿದ್ಧ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ ಎಲ್ಲಿ ಬೇಕಾದರೂ ಕೊಡಿ ನಾನು ಸ್ಪರ್ಧೆಗೆ ನಾನು ಸಿದ್ಧ. ಮುಂದಿನ ಚುನಾವಣೆಯಲ್ಲಿ ಒಂದು ಮನೆಗೆ ಎರಡು ಅವಕಾಶ ಅಂತಾ ಕೊಟ್ಟರೆ ನನ್ನನ್ನೂ ಪರಿಗಣಿಸಿ ಎಂದು ಸಭೆಯಲ್ಲಿ ಸೋಮಣ್ಣ ಬಹಿರಂಗ ಪಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ರನ ಸ್ಫರ್ಧೆ ಬಗ್ಗೆ ಪರೋಕ್ಷವಾಗಿ ಸಚಿವ ಸೋಮಣ್ಣ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

Key words: Bangalore-incharge-Minister- V. Somanna- batting -R. Ashok.