ರೂಪ ಮುದ್ಗಲ್ ವಿರುದ್ಧ CRIMINAL DEFAMATION CASE  ದಾಖಲು.

Promotion

 

ಬೆಂಗಳೂರು, ಫೆ.28, 2023 (www.justkannada.in ) ಐಪಿಎಸ್ ಅಧಿಕಾರಿ ಡಿ. ರೂಪಾ ಮುದ್ಗಲ್  ವಿರುದ್ಧ , ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ  ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು.

ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಇಂದು ಹಾಜರಾಗಿದ್ದ ರೋಹಿಣಿ ಸಿಂಧೂರಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

ಈ ವೇಳೆ,  ತಡೆಯಾಜ್ಞೆ ಇದ್ದರೂ, ರೂಪಾ ಮುದ್ಗಲ್ ,  ಸಾಮಾಜಿಕ ಜಾಲತಾಣದಲ್ಲಿ  ಅವಹೇಳನಕಾರಿ  ಬರವಣಿಗೆ ಪೋಸ್ಟ್ ಮಾಡುತ್ತಿದ್ದಾರೆ. ಆಮೂಲಕ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದರು.

ರೋಹಿಣಿ ಹೇಳಿಕೆ ಆಧರಿಸಿ, ಡಿ.ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಕೋರ್ಟ್ ಮಾರ್ಚ್ 3ಕ್ಕೆ ವಿಚಾರಣೆ ಮುಂದೂಡಿತು.

Key words : Bangalore-high-court-defamation-case-rohinisindhoori-roopa