ನನಗೆ ಬೆಂಗಳೂರು ಅಭಿವೃದ್ಧಿ ಖಾತೆ, ಉಸ್ತುವಾರಿಗೆ ಬೇಕು- ಇಂಗಿತ ವ್ಯಕ್ತಪಡಿಸಿದ ಸಚಿವ ಎಸ್.ಟಿ ಸೋಮಶೇಖರ್

Promotion

ಮೈಸೂರು,ಆಗಸ್ಟ್,6,2021(www.justkannada.in):  ರಾಜ್ಯ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಇದೀಗ ಖಾತೆ ಹಂಚಿಕೆ ನಡೆಯಬೇಕಿದ್ದು ಈ ಮಧ್ಯೆ  ಸಚಿವರು ತಮಗೆ ಬೇಕಾದ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಈ ನಡುವೆ ಬೆಂಗಳೂರು ಅಭಿವೃದ್ಧಿ ಖಾತೆ, ಉಸ್ತುವಾರಿಗೆ ಸಚಿವ ಎಸ್.ಟಿ ಸೋಮಶೇಖರ್ ಆಸೆಪಟ್ಟಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಚಿವ ಎಸ್.ಟಿ ಸೋಮಶೇಖರ್, ನನಗೆ ಬೆಂಗಳೂರು ಅಭಿವೃದ್ಧಿ ಖಾತೆ, ಉಸ್ತುವಾರಿಗೆ ಬೇಕು. ಸಿಎಂ ಯಾವಖಾತೆ ಬೇಕು ಎಂದು ಕೇಳಿದರೇ ಇದನ್ನೇ ಹೇಳುತ್ತೇನೆ. ಬಿಬಿಎಂಪಿ ಚುನಾವಣೆ ಹಿನ್ನೆಲೆ ಈ ಖಾತೆ ನನಗೆ ಅಗತ್ಯ ಎಂದರು.

ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ಹಿಂದೆ ಡಿಕೆಶಿ ಕೈವಾಡ

ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ಹಿಂದೆ ಡಿಕೆ ಶಿವಕುಮಾರ್ ಕೈವಾಡ ಇದೆ ಎಂದು ಆರೋಪಿಸಿದ ಎಸ್.ಟಿ ಸೋಮಶೇಖರ್.  ಪದೇ ಪದೇ ಸಿದ್ಧರಾಮಯ್ಯ ಮುಂದಿನ ಸಿಎಂ ಎನ್ನುತ್ತಿದ್ದರು.  ಇದು ಡಿಕೆ ಶಿವಕುಮಾರ್ ಅಜೀರ್ಣವಾಗಿರಬೇಕು. ಡಿಕೆಗೆ ಇಡಿ ಐಟಿ ಲಿಂಕ್ ಜಾಸ್ತಿ ಇದೆ.  ಹೀಗಾಗಿ ಅವರೇ ಏಕೆ ಇಡಿ ದಾಳಿ ಮಾಡಿಸಿರಬಾರದು. ವ್ಯವಹಾರಗಳು ಸರಿ ಇದ್ದಾಗ ಹೆದರುವ ಅವಶ್ಯಕಲಯತೆ ಇಲ್ಲ. ದಾಖಲೆ ನೀಡಿದರೇ ಸಾಕು  ಎಂದರು.

Key words: Bangalore Development –incharge-Minister -ST Somashekhar -mysore